Breaking News

ಸಾವನ್ನು ಗೆದ್ದು ಬಂದ ಬೆಳಗಾವಿ ಸೇನಾಧಿಕಾರಿ


ಬೆಳಗಾವಿ:ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿ  ಭಾರಿ ಹಿಮಪಾತದಲ್ಲಿ ಬೆಳಗಾವಿ ಮೂಲದ ಸೇನಾಧಿಕಾರಿ ಮೇಜರ್‌ ಶ್ರೀಹರಿ ಕುಗಜಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಡ 115ನೇ ಮಹಾರ್‌ ಬೆಟಾಲಿಯನ್‌ನ ಅಧಿಧಿಕಾರಿ ಶ್ರೀಹರಿ ಕುಗಜಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೇಜರ್‌ ಶ್ರೀಹರಿ ಕುಗಜಿ ಅವರನ್ನು ಕೆಲವೇ ತಿಂಗಳುಗಳ ಹಿಂದೆ ಸೋನಾಮಾರ್ಗ್‌ ಆರ್ಮಿ ಕ್ಯಾಂಪ್‌ಗೆ ನಿಯುಕ್ತಿಗೊಳಿಸಲಾಗಿತ್ತು. ಬುಧವಾರ ಬೆಳಗಿನಜಾವ 5.45ರ ಸುಮಾರಿಗೆ ಘಟನೆ ನಡೆದಾಗ ಶ್ರೀಹರಿ ಸೇರಿದಂತೆ 98 ಸೈನಿಕರು ಕ್ಯಾಂಪ್‌ನಲ್ಲಿದ್ದರು. ಭೀಕರ ಗಾಳಿಯೊಂದಿಗೆ ಭಾರೀ ಸದ್ದೊಂದು ಕೇಳಿಬಂತು. ನೋಡುವಷ್ಟರಲ್ಲೇ ಟೆಂಟ್‌ನ ಚಾವಣಿ ಕುಸಿದು ಎಲ್ಲರೂ ಹಿಮಪಾತದಲ್ಲಿ ಸಿಲುಕಿದ್ದರು. ಸಹಾಯಕ್ಕಾಗಿ ಕೂಗಿಕೊಂಡರೂ ಯಾರೊಬ್ಬರು ಬರಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಸತತ ಎರಡು ತಾಸುಗಳ ಸಾವು-ಬದುಕಿನ ಹೋರಾಟದ ನಂತರ ಮೈಮೇಲೆ ರಾಶಿಯಾಗಿ ಬಿದ್ದ ಅವಶೇಷಗಳು ಹಾಗೂ ಹಿಮದಿಂದ ಕೈ ಹೊರ ಹಾಕುವಲ್ಲಿ ಯಶಸ್ವಿಯಾದರು. ಆಗಷ್ಟೇ ಅಲ್ಲಿ ರಕ್ಷಣಾ ಕಾರ‍್ಯದಲ್ಲಿ ತೊಡಗಿದ್ದ ಇತರ ಸಿಬ್ಬಂದಿ ಇವರ ಕೂಗು ಕೇಳಿ ತಕ್ಷಣ ಹಿಮದಡಿಯಿಂದ ಹೊರ ತೆಗೆದಿದ್ದಾರೆ. ಶ್ರೀಹರಿ ಕುಗಜಿ ಅವರು ಬೆಳಗಾವಿಯ ಗೋವಿಂದರಾಮ ಸಕಾರಿಯಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣದ ಪೂರೈಸಿದ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿದ್ದಾರೆ. 
-souce vijayakaranataka

loading...

No comments