ಯಡಿಯೂರಪ್ಪ-ಈಶ್ವರಪ್ಪ ಭಿನ್ನಮತ ಶಮನಕ್ಕೆ ಅಮಿತ್ ಶಾ ಸಂಧಾನ ಸಭೆ
ಬೆಂಗಳೂರು : ರಾಜ್ಯ ಬಿಜೆಪಿಯ ಬಿಕ್ಕಟ್ಟು ಬಗೆಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರೆದಿರುವ ಸಭೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಅಂದರೆ, ಅಮಿತ್ ಶಾ ಅವರು ವೈಯಕ್ತಿಕವಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮೊದಲು ಈಶ್ವರಪ್ಪ ಮತ್ತು ಸಂತೋಷ್ ಅವರಿಂದ ಅಭಿಪ್ರಾಯ ಸಂಗ್ರಹ. ನಂತರ ರಾಮ್‌ಲಾಲ್, ಮುರಳೀಧರರಾವ್ ಅವರೊಂದಿಗೆ ಮಾತುಕತೆ. ಅಂತಿಮವಾಗಿ ಯಡಿಯೂರಪ್ಪ ಸೇರಿದಂತೆ ಎಲ್ಲ ಮುಖಂಡರನ್ನು ಒಳಗೊಂಡು ಸಭೆ ನಡೆಸಿ ಸಂಧಾನ ಸೂತ್ರ ಸಿದ್ಧಪಡಿಸಲಿದ್ದಾರೆ ಎನ್ನಲಾಗಿದೆ.
ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವರನ್ನು ರಾಜಿ ಸಂಧಾನದ ಮೂಲಕ ತುರ್ತಾಗಿ ಬಗೆಹರಿಸಲು ಅಮಿತ್ ಶಾ- ಶತಾಯ-ಗತಾಯ ಪ್ರಯತ್ನ ಮಾಡಲಿದ್ದು, ಇಬ್ಬರಿಗೂ ಪಕ್ಷದ ಶಿಸ್ತು ಮತ್ತು ಸಂಘಟನೆ ಬಗ್ಗೆ ಕಿವಿಮಾತು ಹೇಳಲಿದ್ದಾರೆ ಎಂದು ಮೂಲಗಳು ತಿಳ್ಸಿವೆ
ಬಿಜೆಪಿ ವರಿಷ್ಠರ ಎದುರು ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರಗಳನ್ನು ಈಶ್ವರಪ್ಪ ಪ್ರಶ್ನಿಸಲಿದ್ದಾರೆ. ಹಾಗೆಯೇ, ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಪಕ್ಷದ ಕಟ್ಟಳೆಗಳನ್ನು ಮೀರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಯಡಿಯೂರಪ್ಪ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗಿದೆ
loading...
No comments