Breaking News

ಪೈಪ್ ಏರಿ ಮಹಿಳೆ ಸ್ನಾನ ಮಾಡುತ್ತಿದ್ದುದನ್ನು ಕದ್ದು ನೋಡಿದ ವ್ಯಕ್ತಿ ಕೆಳಗೆ ಬಿದ್ದು ಗಾಯ



ಬೆಂಗಳೂರು: ವ್ಯಕ್ತಿಯೊಬ್ಬ ಪೈಪ್ ಏರಿ ಮಹಿಳೆ ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡಿದ ಘಟನೆ ವಿವೇಕ್ ನಗರದ ಜಾನ್ ಬುಲ್ ರಸ್ತೆಯಲ್ಲಿ ನಡೆದಿದೆ.

ವಿವೇಕ್ ನಗರದ ನಿವಾಸಿಯಾದ 55 ವರ್ಷದ ರಮೇಶ್ ಎಂಬಾತನಿಂದ ಕೃತ್ಯ ನಡೆದಿದೆ. ಪೈಪ್ ಮೂಲಕ 2ನೇ ಮಹಡಿ ಹತ್ತಿದ ಭೂಪ ಮಹಿಳೆ ಕಿರುಚಿಕೊಂಡು ಕಿಟಕಿ ಬಾಗಿಲು ಹಾಕಿದಾಗ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ರಮೇಶ್‍ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿವೇಕ್ ನಗರ ಪೊಲೀಸರು ರಮೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತನ್ನ ವಿಕೃತ ಮನಸ್ಥಿತಿ ಬಿಚ್ಚಿಟ್ಟಿದ್ದಾನೆ. ಮಹಿಳೆಯ ಪತಿ ಸಾವನಪ್ಪಿ ಮೂರು ತಿಂಗಳಷ್ಟೆ ಆಗಿದ್ದು ತನ್ನ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ.

via public tv


loading...

No comments