ಕೋಕೆನ್ ನೊಂದಿಗೆ ನೈಜಿರಿಯ ಪ್ರಜೆ ಸೆರೆ
ಮಂಗಳೂರು : ಕೋಕೆನ್ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಘಾನಾ ರಾಷ್ಷ್ರದ ಪ್ರಜೆಯನ್ನು ರೂ. 5.5 ಲಕ್ಷ ಮೌಲ್ಯದ ಕೋಕೇನ್ ನೊಂದಿಗೆ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತನನ್ನು ಘಾನಾ ದೇಶದ ನಿವಾಸಿ ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ (37) ಎಂದು ಗುರುತಿಸಲಾಗಿದೆ .ಈತನು ಸುಮಾರು 2 ವರ್ಷದ ಹಿಂದೆ ಭಾರತಕ್ಕೆ ಬಿಸಿನೆಸ್ ವೀಸಾದಲ್ಲಿ ಬಂದವನು ನಂತರ ಘಾನಾ ದೇಶಕ್ಕೆ ವಾಪಾಸು ಹೋಗದೇ ಅನಧಿಕೃತವಾಗಿ ಭಾರತದಲ್ಲಿ ವಾಸ್ತವ್ಯವಿದ್ದುಕೊಂಡು ಈ ರೀತಿ ಕೊಕೇನ್ ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ
loading...
No comments