Breaking News

ಪಾಕಿಸ್ತಾನದಲ್ಲಿ ಹಫೀಜ್ ಸಯೀದ್ ಬಂಧನ


ಲಾಹೋರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ಅಧಿಕಾರಿಗಳು ಕಳೆದ ರಾತ್ರಿ ಮುಂಬೈ ದಾಳಿಯ ರೂವಾರಿ ಮತ್ತು ಜಮಾತ್-ಉದ್-ದಾವಾ (ಜೆಯುಡಿ) ಅಧ್ಯಕ್ಷ ಹಫೀಜ್ ಸಯೀದ್ ಮತ್ತು ಇತರ ನಾಲ್ವರನ್ನು ಭಯೋತ್ಪಾದನಾ ತಡೆ ಕಾಯ್ದೆಯಡಿ ಬಂಧಿಸಿದರು.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸಚಿವಾಲಯ ಹೊರಡಿಸಿರುವ ಬಂಧನ ಆದೇಶದಂತೆ ಅಧಿಕಾರಿಗಳಿ ಹಫೀಜನನ್ನು ಲಾಹೋರಿನ ಮಸೀದಿಯೊಂದರಿಂದ ದಸ್ತಗಿರಿ ಮಾಡಿದರು.

ಇದೇ ವೇಳೆ ಅಧಿಕಾರಿಗಳು ಲಾಹೋರ್ ರಸ್ತೆಗಳಲ್ಲಿ ಹಾಕಲಾಗಿರುವ ಜೆಯುಡಿ ಬ್ಯಾನರುಗಳ ತೆರವುಗೊಳಿಸಲಾರಂಭಿಸಿದ್ದಾರೆ. ಹಫೀಜ್ ಮತ್ತು ಇತರನ್ನು ತಕ್ಷಣ ಬಂಧಿಸಬೇಕು ಇಲ್ಲದಿದ್ದರೆ ನಿರ್ಬಂಧ  ಎದುರಿಸಬೇಕಾದೀತು ಎಂದು ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಜೆಯುಡಿ ಈಗ ನಿಷೇಧಿತ ಭಯೋತ್ಪಾದನಾ ಗುಂಪಾದ ಲಷ್ಕರ್ ತೊಯಿಬಾದೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದೆ. ಇದು ಭಾರತದಲ್ಲಿ ಹಲವಾರು ಭಯೋತ್ಪಾದನಾ ದಾಳಿ ನಡೆಸಿದೆ. ಇವುಗಳಲ್ಲಿ ಹಫೀಜ್ ರೂವಾರಿಯಾಗಿದ್ದ 2008ರ ನವಂಬರ್ 26ರ4ಂದು ನಡೆದಿರುವ ಮುಂಬೈ ಭಯೋತ್ಪಾದನಾ ದಾಳಿಯೂ ಸೇರಿದೆ.

“ಕಾಶ್ಮೀರಿಗಳ ಪರವಾಗಿ ಧ್ವನಿಯಾಗಿರುವ ಜೆಯುಡಿ ಮೇಲೆ ಅಮೆರಿಕ ಮತ್ತು ಭಾರತದ ಒತ್ತಡಕ್ಕೆ ಮಣಿದು ಪಾಕ್ ಸರ್ಕಾರ ನಿಷೇಧ ಹೇರಿದರೆ ಕೇರ್ ಮಾಡುವುದಿಲ್ಲ” ಎಂದು ಹಫೀಜ್ ಪ್ರತಿಕ್ರಿಯಿಸಿದ್ದಾನೆ.

loading...

No comments