ಫೇಸ್‍ಬುಕ್‍ನಲ್ಲಿ ಗೆಳತಿಯ ಚಿತ್ರ ಪೋಸ್ಟ್ ಮಾಡಿದ ಕ್ರಿಕೆಟಿಗ ಯಾರು ಗೊತ್ತೇ ?
ಢಾಕಾ,- ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ತನ್ನ ಗೆಳತಿಯ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಖ್ಯಾತ ಕ್ರಿಕೆಟ್ ತಾರೆ ಅರಾಫತ್ ಸನ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಧಾನಿ ಢಾಕಾದ ಉಪನಗರ ಅಮೀನ್‍ಬಜಾರ್ ಪ್ರದೇಶದ ಸ್ವಗೃಹದಲ್ಲಿ 30 ವರ್ಷದ ಎಡಗೈ ಬೌಲರ್ ಸನ್ನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಸನ್ನಿಗೆ ದೀರ್ಘಕಾಲದ ಗೆಳತಿ ಎರಡು ವಾರಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಸನ್ನಿ ತನ್ನ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ಸೃಷ್ಟಿಸಿ, ಅದರಲ್ಲಿ ತಮ್ಮಿಬ್ಬರ ತೀರಾ ವೈಯಕ್ತಿಕ ಚಿತ್ರಗಳನ್ನು ಪೋಸ್ಟ್ ಮಾಡಿರುವುದಾಗಿ ಪ್ರೇಯಸಿ ದೂರಿನಲ್ಲಿ ತಿಳಿಸಿದ್ದಳು.
-eesanje
loading...
No comments