Breaking News

ಮೋದಿಯಿಂದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ನಾಶ : ಪ್ರಶಾಂತ್ ಭೂಷಣ್


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಭ್ರಷ್ಟ್ರಾಚಾರ ನಿಗ್ರಹ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿದ್ದಾರೆ. ನೋಟು ಅಮಾನ್ಯ ನಿರ್ಧಾರದಿಂದ ಖಾಸಗಿ ಬಂಡವಾಳಗಾರರಿಗೆ ಲಾಭವಾಗಿದೆಯೇ ಹೊರತು ಯಾವುದೇ ಕಪ್ಪುಹಣ ಹೊರಬಂದಿಲ್ಲ. ಎನ್‌ಡಿಎ ಸರ್ಕಾರ ದೇಶದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೂನ್ಯ ಸರ್ಕಾರವಾಗಿದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಹಾಗೂ ಸ್ವರಾಜ್ ಆಂದೋಲನದ ಮುಖ್ಯಸ್ಥ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿಂದು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಸ್ವರಾಜ್ ಅಭಿಯಾನ ವತಿಯಿಂದ ಏರ್ಪಡಿಸಿದ್ದ ನೋಟು ಅಮಾನ್ಯ ನಿರ್ಧಾರದ ಸಾಧಕ-ಬಾಧಕಗಳ ಕುರಿತ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.
ಕಪ್ಪು ಹಣ ತಡೆ ಹಾಗೂ ಭಯೋತ್ಪಾದಕರಿಗೆ ಸರಬರಾಜಾಗುತ್ತಿರುವ ಹಣವನ್ನು ತಡೆಗಟ್ಟುವುದು ನೋಟು ರದ್ದತಿಯ ಹಿಂದಿರುವ ಉದ್ದೇಶ ಎಂದು ಈ ಹಿಂದೆ ಹೇಳಲಾಯಿತು. ಆದರೆ ಈಗ ಉದ್ದೇಶ ಬದಲಾಗಿದೆ. ನಗದುರಹಿತ ವ್ಯವಸ್ಥೆ ರೂಪಿಸುವುದು ನೋಟು ಅಮಾನ್ಯದ ಹಿಂದಿರುವ ಉದ್ದೇಶ ಎಂದು  ಜನರನ್ನು ನಂಬಿಸಲಾಗುತ್ತಿದೆ. ದೇಶದ ಶೇಕಡಾ ೫೦ರಷ್ಟು ಜನರಲ್ಲಿ ಬ್ಯಾಂಕ್ ಖಾತೆಯೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಗದುರಹಿತ ಆರ್ಥಿಕತೆ ನಿರ್ಮಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ನೋಟು ಅಮಾನ್ಯ ನಿರ್ಧಾರದ ಬಳಿಕ ಉತ್ಪಾದನಾ ವಲದಯಲ್ಲಿ ಶೇಕಡಾ ೩೫ರಷ್ಟು ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ. ಆದಾಯ ಗಳಿಕೆಯಲ್ಲಿ ಶೇಕಡಾ ೫೦ರಷ್ಟು ಇಳಿಕೆಯಾಗಿದೆ. ಮುಂದಿನ ಒಂದು ವರ್ಷದಲ್ಲಿ ದೇಶದ ಅಭಿವೃದ್ಧಿ ದರ ಋಣಾತ್ಮಕವಾಗಲಿದೆ ಎಂದು ಎಚ್ಚರಿಸಿದ ಅವರು, ನೋಟು ಅಮಾನ್ಯ ನಿರ್ಧಾರ ಪ್ರಕಟಗೊಂಡ ಮರುದಿನವೇ ಪೇಟಿಯಂನ ಜಾಹೀರಾತಿನಲ್ಲಿ ಪ್ರಧಾನಿ ಅವರು ಭಾವಚಿತ್ರ ಪ್ರಕಟಗೊಳ್ಳುತ್ತದೆ. ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವ ಮೊದಲು ಯಾವ ಪರಿಣಿತರು, ಆರ್ಥಿಕ ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ. ಮಾತ್ರವಲ್ಲ ಯಾವ ಪೂರ್ವಸಿದ್ಧತೆಗಳನ್ನೂ ಕೈಗೊಂಡಿರಲಿಲ್ಲ ಎಂದು ಹೇಳಿದರು.
-sanje wani


loading...

No comments