Breaking News

ಅಂಬೇಡ್ಕರ್ ಕಮಾನಿಗೆ ಚಪ್ಪಲಿಹಾರ ಹನೂರು ಉದ್ವಿಗ್ನ


ಕೊಳ್ಳೆಗಾಲ :  ಭೀಮಾನಗರದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಸ್ವಾಗತ ಕಮಾನಿಗೆ ಕಿಡಿಗೇಡಿಗಳು ಚಪ್ಪಲಿಹಾರ ಹಾಕಿದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಜ.22ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   
ಉದ್ರಿಕ್ತರ ಗುಂಪು ಒಂದು ಅಂಗಡಿಮುಂಗಟ್ಟುಗಳಿಗೆ ನುಗ್ಗಿ ಸಿಕ್ಕ, ಸಿಕ್ಕ ಕಡೆ ಕಲ್ಲು ತೂರಾಟ ನಡೆಸಿದ್ದರಿಂದ ಪಟ್ಟಣದ ಜನತೆ ಭಯಭೀತರಾಗಿ ದಿಕ್ಕಾಪಾಲಾಗಿದ್ದರು. ಈ ಘಟನೆಯಲ್ಲಿ ಕೆಲವು ಅಮಾಯಕ ನಾಗರಿಕರಿಗೆ ಸಣ್ಣಪುಟ್ಟ ಗಾಯಗಳೂ ಆಗಿತ್ತು.  ನಂತರ ಮುಖ್ಯರಸ್ತೆಗೆ ನುಗ್ಗಿದ ಪ್ರತಿಭಟನಾಕಾರರು ಕೆಎಸ್‍ಆರ್‍ಟಿಸಿ ಬಸ್‍ಗಳು, ಪೊಲೀಸ್ ಜೀಪ್‍ಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು ಇದರಿಂದ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು .ಜ.22ರವರೆಗೆ ತಾಲೂಕಿನಲ್ಲಿ ನಿಷೇಧಾಜ್ಞೆ ಹಾಕಲಾಗಿದೆ 
loading...

No comments