Breaking News

ನಜೀಬ್ ಪರ ಸಿ ಎಫ್ ಐ ಅಭಿಯಾನ


ಮಂಗಳೂರು :ದೇಶವು ನಜೀಬ್ ನನ್ನು ಕೇಳುತ್ತಿದೆ ಪ್ರಧಾನಿಯವರೇ ಉತ್ತರಿಸಿ ಎಂದು ಕ್ಯಾಂಪಸ್ ಫ್ರಂಟ್  ಶುಕ್ರವಾರ ಸಂಜೆ ಜ್ಯೋತಿ ವೃತ್ತದ ಬಳಿ ವಿದ್ಯಾರ್ಥಿ ಸರಪಳಿ ಮಾಡಿ ಪ್ರತಿಭಟನೆ ನಡೆಸಿತು .

ಪ್ರತಿಭಟನಾ ಸಭೆಯ ಅಂಗವಾಗಿ ದ.ಕ ಜಿಲ್ಲಾಧ್ಯಕ್ಷರಾದ ಅಥಾಉಲ್ಲಾರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ತುಫೈಲ್ ಮಾತನಾಡಿ ಜೆ.ಎನ್. ಯು ವಿದ್ಯಾರ್ಥಿ ನಜೀಬ್ ಕಾಣೆಯಾಗಿ 90 ದಿನಗಳಾದರೂ ಸರ್ಕಾರ ಹಾಗೂ ದೆಹಲಿ ಪೋಲಿಸರು ಆರೋಪಿಗಳನ್ನು ಪತ್ತೆಹಚ್ಚವಲ್ಲಿ ವಿಫಲವಾಗಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು .ಸಿ.ಎಫ್.ಐ ಮುಖಂಡರಾದ ಇಮ್ರಾನ್ , ರಿಯಾಝ್ ಕಡಂಬು ಮುಂತಾದವರು ಉಪಸ್ಥಿತರಿದ್ದರು.loading...

No comments