Breaking News

ಎತ್ತಿನಹೊಳೆ ಕಾಮಗಾರಿ ಮರಗಳ ನಾಶ ಕೇಂದ್ರದ ಪರಿಸರ ಅಧಿಕಾರಿಗಳ ಅಧ್ಯಯನ

photosource public tv





ಹಾಸನ : ಎತ್ತಿನ ಹೊಳೆ ಯೋಜನೆ ಹೆಸರಿನಲ್ಲಿ ಪರಿಸರ ನಾಶ ಮಾಡಿ ಮರಗಳನ್ನು ಕಡಿದು ಹಾಕಲಾಗಿದೆ ಎಂದು ಆರೋಪಿಸಿ ಪರಿಸರ ಪ್ರೇಮಿಗಳ ತಂಡ ಹಸಿರು ನ್ಯಾಯಪೀಠಕ್ಕೆ ದೂರು ದಾಖಲಿಸಿತ್ತು. ದೂರು ಆಲಿಸಿರುವ ಹಸಿರು ನ್ಯಾಯಪೀಠ ಸ್ಥಳಪರಿಶೀಲನೆ ನಡೆಸುವಂತೆ ಕೇಂದ್ರ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಈ ಹಿನ್ನಲೆಯಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೇಂದ್ರದ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಅಧಿಕಾರಿಗಳು ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.
ಇಂದು ಸಕಲೇಶಪುರದಲ್ಲಿ ಪರಿಶೀಲನೆ ನಡೆಸಿದ ಮೂವರು ಅಧಿಕಾರಿಗಳ ತಂಡ ಮಂಗಳವಾರವೂ ಅಧ್ಯಯನ ನಡೆಸಲಿದೆ. ಕೇಂದ್ರದ ತಂಡದಲ್ಲಿ ಅರಣ್ಯಾಧಿಕಾರಿಗಳಾದ ಅವಿನಾಶ್ ಎಂ ಕಾನ್ಪಡೆ, ಪದ್ಮಾವಥೆ ಮತ್ತು ಪರಿಸರ ವಿಜ್ಞಾನಿ ತಿರುನವಕ್ಕರಸು ಇದ್ದಾರೆ.

source public tv

No comments