Breaking News

ಪ್ರಧಾನಿ ಹುದ್ದೆಗೆ ಮೋದಿ ಅನರ್ಹರು : ಸಚಿವ ಟಿ.ಬಿ.ಜಯಚಂದ್ರ


ತುಮಕೂರು,- ನೋಟ್ ಬ್ಯಾನ್‍ನಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು, ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ನರೇಂದ್ರ ಮೋದಿಯವರಿಗೆ ಯಾವುದೇ ನೈತಿಕತೆ ಇಲ್ಲ. ಆದುದರಿಂದ ಕೂಡಲೇ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಈ ಕಾಳಧನ ಮತ್ತು ನಕಲಿ ನೋಟು ತಡೆಯುವ ಉದ್ದೇಶದಿಂದ ಈ ನೋಟು ಅಮಾನಿಕರಣಗೊಳಿಸಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳುತ್ತಿರುವುದು ಬರೀ ಕಾರಣವಷ್ಟೇ. ಇದರಿಂದಾಗಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ ಎಂದರು.  ನೋಟು ರದ್ಧತಿಯಿಂದ ದೇಶದಲ್ಲಿ 115ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅವರಿಗೆಲ್ಲಾ ಪರಿಹಾರ ಯಾರು ನೀಡುತ್ತಾರೆ. ಮೃತಪಟ್ಟ ಕುಟುಂಬಗಳ ಮುಂದಿನ ಭವಿಷ್ಯದ ಬಗ್ಗೆ ಪ್ರಧಾನಿಗಳಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಒಂದು ತಿಂಗಳು ಕಾಲ ನಡೆದ ಸಂಸತ್ ಅವೇಶನದಲ್ಲಿ ಇವರ ಬಗ್ಗೆ ಸಾಂತ್ವಾನದ ಮಾತನ್ನೂ ಸಹ ಆಡಿಲ್ಲ, ಪರಿಹಾರವನ್ನೂ ನೀಡಲಿಲ್ಲ ಎಂದು ಟೀಕಿಸಿದರು.


via ee sanje

No comments