Breaking News

ವಾಮಾಚಾರ ಮಾಡಿ ವಂಚನೆಗೈಯುತಿದ್ದ ಡೋಂಗಿ ಬಾಬಾನಿಗೆ ಬಿತ್ತು ಗೂಸಾ


ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆಯಲ್ಲಿ ವಾಮಾಚಾರ ಮಾಡಿ ಜನರನ್ನು ವಂಚಿಸುತ್ತಿದ್ದ ಮಂತ್ರವಾದಿಯ ಕೆಲಸಕ್ಕೆ ಗ್ರಾಮಸ್ಥರೇ ತಡೆ ಹಾಕಿ, ಗೂಸಾ ಕೊಟ್ಟು ಕಳಿಸಿದ ಘಟನೆ  ವರದಿ ಆಗಿದೆ ವಂಚಕನನ್ನು ಸಲೀಂ ಎಂದು ಗುರುತಿಸಲಾಗಿದೆ .

ಜನರ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡ ಡೋಂಗಿ ಬಾಬಾ ಸಲೀಂ ಎಂಬಾತ ಪೂಜೆ ಪುನಸ್ಕಾರದ ಹೆಸರಲ್ಲಿ ಅಮಾಯಕರಿಗೆ ವಂಚಿಸಲು ಮುಂದಾಗಿದ್ದ. ನಂಬಿ ಬಂದವರಿಗೆ ಮಂಕುಬೂದಿ ಎರಚುವ ಕಾಯಕ ಮಾಡ್ಕೊಂಡಿದ್ದ. ವಿಷಯ ತಿಳಿದ ತೀರ್ಥಹಳ್ಳಿ ಹಣಗೆರೆ ಕಟ್ಟೆ ಗ್ರಾಮಸ್ಥರೇ ವಂಚಕನಿಗೆ ಸಖತ್ ಗೂಸಾ ಕೊಟ್ಟಿದ್ದಾರೆ.ವಾಮಾಚಾರಕ್ಕಾಗಿ ಡೋಂಗಿ ಬಾಬಾ ಪಡೆದಿದ್ದ 38 ಸಾವಿರ ರೂ. ಹಣವನ್ನು ಪೊಲೀಸರ ಸಮ್ಮುಖದಲ್ಲಿ ಸಂಬಂಧಿಸಿದವರಿಗೆ ಗ್ರಾಮಸ್ಥರು ಹಸ್ತಾಂತರಿಸಿದ್ದಾರೆ. ಡೋಂಗಿ ಬಾಬಾನಿಂದ ಮುಚ್ಚಳಿಕೆ ಬರೆಸಿಕೊಂಡ ಪೊಲೀಸರು ನಂತರ ಬಿಟ್ಟು ಕಳಿಸಿದ್ದಾರೆ.
-source public tv

loading...

No comments