Breaking News

ಯಾವುದೇ ಕಾರಣಕ್ಕೂ ಜೆಡಿಎಸ್ ಸೇರಲ್ಲ ಈಶ್ವರಪ್ಪ ಸ್ಪಷ್ಟನೆಚಿಕ್ಕೋಡಿ :ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಜೆಡಿಎಸ್ ಸೇರುತಾರೆ ಎಂಬ ವರದಿ ಮಾಧ್ಯಗಳಲ್ಲಿ ವರದಿಯಾಗಿತ್ತು ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪನವರು ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗೆ ತೆರೆ ಎಳೆದಿದ್ದಾರೆ  ಮಾತೃ ಪಕ್ಷವನ್ನು ತೊರೆಯುವುದಿಲ್ಲ ತಾನು ಯಾವುದೇ ಕಾರಣಕ್ಕೂ ಬೇರೆ ಪಕ್ಷ ಸ್ಥಾಪನೆ ಮಾಡುವುದಾಗಲೀ, ಅಥವಾ ಸೇರುವುದಾಗಲಿ ಮಾಡಿದ್ರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ ಎಂದು ಹೇಳಿಕೆ ನೀಡಿದರು .
 ತಾನು ಜೆಡಿಎಸ್ ಪಕ್ಷ ಸೇರುತ್ತೇನೆ ಎಂಬವುದು ಕೇವಲ ವದಂತಿ. ಬೇಕಿದ್ದರೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್ ಡಿ ದೇವೇಗೌಡರೇ ಬಿಜೆಪಿ ಸೇರಲಿ. ಈ ಕುರಿತು ತಾನು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ ಎಂದು ಕೆ ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಮತ್ತು ಯಾವುದೇ ಕಾರಣಕ್ಕೂ ಕೂಡ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು
-source public tv

loading...

No comments