Breaking News

ಜಾನುವಾರು ಸಾಗಾಟ ಲಾರಿ ಪಲ್ಟಿ ಗೋ ಕಳ್ಳರು ಪರಾರಿ


ಮೈಸೂರು : ಕಳವು ಮಾಡಿದ ಜಾನುವಾರುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಬೆನ್ನಟ್ಟಿದ್ದ ಸ್ಥಳೀಯರನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಟ್ರಕ್ ಪಲ್ಟಿಯಾದ ಘಟನೆ ಹಣಸೂರು ತಾಲೂಕಿನಲ್ಲಿ ನಡೆದಿದೆ. ವಾಹನದಲ್ಲಿದ್ದ ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ ಒಂದು ದನ ಅಸುನೀಗಿತ್ತು.

ಬೆಳ್ಳಂಬೆಳಿಗ್ಗೆ ಇಲ್ಲಿನ ಗ್ರಾಮವೊಂದಕ್ಕೆ ಬಂದಿದ್ದ ಗೋಗಳ್ಳರು ಎರಡು ದನ ಹಾಗೂ ಒಂದು ಕರುವನ್ನು ಕಳವು ಮಾಡಿದ್ದರು. ಗೌರಮ್ಮ ಮತ್ತು ಉಮೇಶ್ ಎಂಬವರಿಗೆ ಸೇರಿದ ಈ ಜಾನುವಾರುಗಳನ್ನು ಲಾರಿಗೆ ತುಂಬಿಸಿದ್ದರು. ಪ್ರಭಾಕರ್ ಎಂಬವರಿಗೆ ಸೇರಿದ ಇನ್ನೊಂದು ದನವನ್ನು ಕಳವು ಮಾಡಿ ಲಾರಿಗೆ ತುಂಬುತ್ತಿದ್ದ ವೇಳೆ ಅದನ್ನು ಗಮನಿಸಿ ಅವರು ಬೊಬ್ಬೆ ಹಾಕಿದ್ದರು. ತಾವು ಸಿಕ್ಕಿ ಬೀಳುತ್ತೇವೆ ಎನ್ನುವ ಭಯದಿಂದ ಆರೋಪಿಗಳು ಅದನ್ನು ಬಿಟ್ಟು ಟ್ರಾಕ್ ಚಾಲು ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರನ್ನು ಅವರನ್ನು ಬಿಡದೇ ಬೈಕಿನಲ್ಲಿ ಹಿಂಬಾಲಿಸಿದ್ದಾರೆ.

ಅರೆಕರೆ ಕೊಪ್ಪಲ್ ಎಂಬಲ್ಲಿನ ರಸ್ತೆ ತಿರುವಿನಲ್ಲಿ ಬೈಕ್ ಸವಾರರು ಜಾನುವಾರು ಸಾಗಾಟಗಾರರನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅತೀ ವೇಗದಿಂದ ಬಂದ ಟ್ರಕ್ ಉರುಳಿ ಬಿದ್ದಿದೆ. ಬಳಿಕ ಆರೋಪಿಗಳನ್ನು, ಜಾಣುವಾರುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಆರೋಪಿ ಗೋಕಳ್ಳರು ಹುಣಸೂರಿನ ಶಬ್ಬೀರ್ ನಗರ ವ್ಯಾಪ್ತಿಯ ನಿವಾಸಿಗಳು ಎಂದು ತಿಳಿದುಬಂದಿದೆ.



loading...

No comments