Breaking News

ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬಾಳ್ಕರ್ ಮನೆಗೆ ಐಟಿ ದಾಳಿಬೆಂಗಳೂರು : ಸಣ್ಣ ಕೈಗಾರಿಕೆಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿ ಹೊಳಿ ಮನೆ, ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಮನೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬಾಳ್ಕರ್ ಹಾಗೂ ಕಾಂಗ್ರೆಸ್ ಮುಖಂಡ ಜಾವೀದ್ ಮಲ್ಲಾ ಅವರುಗಳ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ ಮತ್ತು ಮಹತ್ವದ ದಾಖಲೆಗಳನ್ನು  ಪರಿಶೀಲನೆ ನಡೆಸುತ್ತಿದ್ದಾರೆ. ಈ ದಾಳಿಯನ್ನು ಗೋವಾ ಘಟಕದ ಅಧಿಕಾರಿಗಳು ನಡೆಸಿದ್ದು, ಇದಕ್ಕೆ ಬೆಂಗಳೂರಿನ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇಷ್ಟೇ ಅಲ್ಲದೆ ಗೋಕಾಕ್'ನಲ್ಲಿರುವ ರಮೇಶ್ ಜಾರಕಿಹೊಳಿಯ ಆಪ್ತರ 4 ಮನೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ .
loading...

No comments