Breaking News

3g ಫೋನ್ ಗಳಲ್ಲಿ ಉಚಿತ ಜಿಯೋ ಇಂಟರ್ನೆಟ್ ಸೌಲಭ್ಯ


ನವದೆಹಲಿ : ಇಂಟರ್ನೆಟ್ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪೈಪೋಟಿಗೆ ಇಳಿದ ರಿಲಯನ್ಸ್ ಇದೀಗ ನಿಮ್ಮ 3g ಫೋನ್ ನಲ್ಲಿ ಕೂಡ ಉಚಿತ ಜಿಯೋ ಇಂಟರ್ನೆಟ್  ಬಳಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲಿದ್ದು ಈ ಅಪ್ಲಿಕೇಶನ್ ಮುಖಾಂತರ ನೀವು ನಿಮ್ಮ 3g ಸ್ಮಾರ್ಟ್ ಫೋನ್ ಗಳಲ್ಲಿ ಜಿಯೋ ಇಂಟರ್ನೆಟ್ ಸೇವೆಗಳನ್ನು ಬಳಸಬಹುದು ಎಂದು ಹೇಳಲಾಗಿದೆ .
ಡಿಜಿಟಲ್ ಇಂಡಿಯಾದಲ್ಲಿ ಇನ್ನು ಹೆಚ್ಚಿನ ಗ್ರಾಹಕರನ್ನು ತಮ್ಮ ತೆಕ್ಕೆಗೆ ಬೀಳಿಸುವ ನಿಟ್ಟಿನಲ್ಲಿ ಈ ಹೊಸ ಪ್ರಯೋಗವನ್ನು ಮಾಡಲಾಗುತ್ತಿದೆ. ಈ ಅಪ್ಲಿಕೇಶನ್ ಅನ್ನು ಜನವರಿ ತಿಂಗಳು ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ರಿಲಯನ್ಸ್ ಸಂಸ್ಥೆಯ ಮೂಲಗಳು ತಿಳಿಸಿವೆ .ಈ ಸೇವೆ ಮಾರ್ಚ್ 31 2017 ಕ್ಕೆ ಕೊನೆಗೊಳ್ಳುವುದು .

loading...

No comments