ಪಾಕಿಸ್ತಾನ ವಶದಲ್ಲಿದ್ದ ಭಾರತೀಯ ಯೋಧ ಚಂದು ಚವಾಣ್ ಬಿಡುಗಡೆ
ಹೊಸದಿಲ್ಲಿ: ಗಡಿ ರೇಖೆಯಲ್ಲಿ ಪ್ರಮಾದವಶಾತ್ ಗಡಿದಾಟಿದ್ದ ಭಾರತದ ಯೋಧ ಚಂದು ಚವಾಣ್ ಅವರನ್ನು ಪಾಕಿಸ್ತಾನ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದ್ದು .ಇಂದು ಭಾರತೀಯ ಸಮಯ ೨.೩೦ ರ ಸಮಯ ವಾಗಾಹ್ ಗಡಿಯಲ್ಲಿ ಚಂದು ಚವಾಣ್ ಅವರನ್ನು ಭಾರತೀಯ ಸೇನಾ ಅಧಿಕಾರಿಗಳು ಬರಮಾಡಿಕೊಂಡರು .
22 ವರ್ಷದ ಚವಾಣ್ ರಾಷ್ಟ್ರೀಯ ರೈಫಲ್ಸ್ 37ನೇ ತುಕಡಿಗೆ ಸೇರಿದ ಯೋಧನಾಗಿದ್ದು, ಕಳೆದ ವರ್ಷ ಪ್ರಮಾದವಶಾತ್ ಗಡಿದಾಟಿ ಪಾಕ್ ನೆಲಕ್ಕೆ ಪ್ರವೇಶಿಸಿದ್ದರು.ನಿಯಂತ್ರಣ ರೇಖೆ ಬಳಿ ಉಗ್ರರ ನೆಲೆಗಳ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ ವೇಳೆ ಈ ಘಟನೆ ನಡೆದಿತ್ತು. ಚವಾಣ್ ಮಹಾರಾಷ್ಟ್ರದ ಧುಲೆ ಜಿಲ್ಲೆಗೆ ಸೇರಿದವರು.
ಚವಾಣ್ ಅವರನ್ನು ಸುರಕ್ಷಿತ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಭರವಸೆ ನೀಡಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ ಜನವರಿ 12ರಂದು ಹೇಳಿಕೆ ನೀಡಿದ್ದರು.
loading...
No comments