ಕಪ್ಪತಗುಡ್ಡ ವನ್ನು ತಿಂದು ತೇಗಲು ಹುನ್ನಾರ
ಗದಗ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಗಿರುವ ಕಪ್ಪತಗುಡ್ಡ ಗದಗ ಜಿಲ್ಲೆಯಲ್ಲಿದ್ದು ಒಟ್ಟು ಸುಮಾರು 44.680 ಎಕರೆ ವಿಸ್ತರವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಕಪ್ಪತ ಗುಡ್ಡದ ಪ್ರದೇಶದಲ್ಲಿ 225 ಎಕರೆ ಪ್ರದೇಶ ಅತ್ಯಮೂಲ್ಯವಾದ ಜೌಷದೀಯ ಸಸ್ಯಗಳನ್ನು ಹೊಂದಿದೆ ಇದರಲ್ಲಿ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಪ್ರದೇಶ ವ್ಯಪ್ತಿಯ ಅರಣ್ಯ ಪ್ರದೇಶದಲ್ಲಿ ಅಪರೂಪದ ಸಸ್ಯವನಗಳು ಇವೆ,
ಅಪಾರ ಖನಿಜ ಮತ್ತು ನೈಸರ್ಗಿಕ ಸಂಪತ್ತನ್ನು ಹೊಂದಿರುವ ಪ್ರದೇಶದ ಮೇಲೆ ಇದೀಗ ಕರ್ನಾಟಕ ಸರ್ಕಾರದ ಕಣ್ಣು ಬಿದ್ದಿದೆ .ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಂಪನಿ ಗಳಿಗೆ ಲಾಭಿ ಮಾಡಲಾಗಿದೆ ಎಂದು ಕೇಳಿ ಬಂದಿದೆ ಇದಕ್ಕೆ ಪೂರಕವಾಗುವಂತೆ ಜಿಲ್ಲೆಯಲ್ಲಿ ದಿನಕ್ಕೆ 1000 ಟನ್ ಚಿನ್ನದ ಅದಿರು ತೆಗೆಯುವ ಸಾಮಥ್ರ್ಯವಿರುವ ಘಟಕ ತೆರೆಯಲು ಅನುಮತಿಸಲಾಗಿದೆ ಮತ್ತು ದಕ್ಷಿಣ ಆಫ್ರಿಕಾದ ಕಂಪೆನಿ ಟರ್ನ್ ಬೆರ್ರಿ ಸಹಾಯದೊಂದಿಗೆ ಈ ಘಟಕ ರೂ 300 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ .
ಬೆಟ್ಟ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಚಿನ್ನದ ಅದಿರಿಗಾಗಿ ಹುಡುಕಾಟ ನಡೆಯುತ್ತಿದೆ. ಕೆಲವರು ಇದರಲ್ಲಿ ಯಶಸ್ವಿಯೂ ಆಗುತ್ತಿದ್ದು ಸ್ಥಳೀಯ ಚಿನ್ನ ಮಾರಾಟಗಾರರು ಶಿರಹಟ್ಟಿ ತಾಲೂಕಿಗೆ ಚಿನ್ನ ಖರೀದಿಸಲು ಹೋಗುವುದೂ ಉಂಟು. 20ನೇ ಶತಮಾನದ ಆರಂಭದಲ್ಲಿ ಧಾರವಾಡ ಗೋಲ್ಡ್ ಮೈನ್ಸ್ ಲಿ ಗದಗ್ ಗೋಲ್ಡ್ ಫೀಲ್ಡ್ ಅಭಿವೃದ್ಧಿಗೆ ಶ್ರಮಿಸಿತ್ತು. ಲಂಡನ್ನಿನ ಜಾನ್ ಟೇಲರ್ ಎಂಡ್ ಸನ್ಸ್ ಈ ಚಿನ್ನದ ಗಣಿಯಲ್ಲಿ 1902ರಿಂದ 1910ರ ತನಕ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. ಆದರೆ ನಂತರ ಇಲ್ಲಿ ಹೆಚ್ಚು ಚಿನ್ನದ ಅದಿರು ಲಭ್ಯವಾಗದೇ ಇದ್ದಿದುರಿಂದ 1912ರ ಹೊತ್ತಿಗೆ ಗಣಿಗಾರಿಕೆ ನಿಂತುಹೋಗಿತ್ತು.
ಈಗ ಬಾಲ್ದೊಟ ಗುಂಪಿನ ರಾಮಗಡ ಮಿನರಲ್ಸ್ ಎಂಡ್ ಮೈನಿಂಗ್ ಪ್ರೈ ಲಿ ಎಂಬ ಕಂಪೆನಿಗೆ ಗಣಿಗಾರಿಕೆ ಹಕ್ಕುಗಳನ್ನು ಗದಗದಿಂದ 32 ಕಿ ಮೀ ದೂರವಿರುವ ಸಾಂಗ್ಲಿ ಗ್ರಾಮದಲ್ಲಿ ಅನುಮತಿ ನೀಡಲಾಗಿದ್ದು ಇದೇ ಕಾರಣಕ್ಕೆ ಸಂರಕ್ಷಣಾ ವಲಯ ಘೋಷಣೆಯನ್ನು ಸರಕಾರ ಹಿಂದಕ್ಕೆ ಪಡೆದಿದೆಯೆಂಬ ಊಹಾಪೋಹಗಳಿವೆ. ಗದಗ ಜಿಲ್ಲೆಯಲ್ಲಿ ದಿನಕ್ಕೆ 1000 ಟನ್ ಚಿನ್ನದ ಅದಿರು ತೆಗೆಯುವ ಸಾಮಥ್ರ್ಯವಿರುವ ಘಟಕ ತೆರೆಯಲು ಅನುಮತಿಸಲಾಗಿದೆಯೆಂದು ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ದಕ್ಷಿಣ ಆಫ್ರಿಕಾದ ಕಂಪೆನಿ ಟರ್ನ್ ಬೆರ್ರಿ ಸಹಾಯದೊಂದಿಗೆ ಈ ಘಟಕ ರೂ 300 ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಸಾಂಗ್ಲಿ ಗಣಿಯಲ್ಲಿ ಒಟ್ಟು 2.4 ಮಿಲಿಯನ್ ಟನ್ ಚಿನ್ನದ ಅದಿರು ಇದೆಯೆಂದು ಅಂದಾಜಿಸಲಾಗಿದ್ದು ಪ್ರತಿ ಟನ್ ಅದಿರಿನಿಲ್ಲಿ 2.8 ಗ್ರಾಂ ಚಿನ್ನ ಲಭ್ಯವಾದರೆ ಕಂಪೆನಿ ಈ ಗಣಿಯಿಂದ ಒಟ್ಟು 8000 ಕೇಜಿ ಚಿನ್ನ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಕಪ್ಪದ ಗುಡ್ಡವನ್ನು ಇನ್ನೊಂದು ಬಳ್ಳಾರಿಯನ್ನಾಗಿಸಲು ಹೊರಟವರ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗಿದೆ . ಸರ್ಕಾರದ ದ್ವಂದ್ವ ಧೋರಣೆ ಯಿಂದ ಗದಗ ಜಿಲ್ಲೆಯ ಜನರು ಬೇಸತ್ತಿದ್ದಾರೆ. ಗಣಿ ಲಾಬಿಗೆ ಜನಪ್ರತಿನಿಧಿಗಳು ತಲೆ ಬಾಗಿದ್ದಾರೆ. ಕಪ್ಪತಗುಡ್ಡ ರಕ್ಷಣೆಗೆ ಮುಂದಾಗಬೇಕಿದ್ದ ಸರ್ಕಾರವೇ ಸಂರಕ್ಷಿತ ಪ್ರದೇಶ ಸ್ಥಾನಮಾನದ ಆದೇಶ ಹಿಂಪಡೆ ದಿರುವುದು ಅನುಮಾನಕ್ಕೆ ಕಾರಣವಾಗಿದೆ
loading...
No comments