ಅಖಿಲೇಶ್ ಪಾಲದ ಸೈಕಲ್ ಚಿಹ್ನೆ
ಉತ್ತರ ಪ್ರದೇಶ : ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಮಧ್ಯೆ ಸೈಕಲ್ ಚಿಹ್ನೆಗಾಗಿ ನಡೆದ ಕಿತ್ತಾಟ ಚುಣಾವಣಾ ಆಯೋಗ ಸೈಕಲ್ ಚಿಹ್ನೆಯನ್ನು ಅಖಿಲೇಶ್ ಯಾದವ್ ಅವರಿಗೆ ನೀಡುವ ಮೂಲಕ ತಾರ್ಕಿಕವಾಗಿ ಅಂತ್ಯ ಕಂಡಿದೆ.
ಮುಂಬರುವ ಉತ್ತರ ಪ್ರದೇಶ ಚುಣಾವಣೆಯನ್ನು ಮುಲಾಯಂ ಸಿಂಗ್ ಯಾದವ್ ಸೈಕಲ್ ಇಲ್ಲದೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಚುಣಾವಣಾ ಆಯೋಗದ ಈ ತೀರ್ಪಿನಿಂದಾಗಿ ಸೈಕಲ್ ಚಿಹ್ನೆ ಮಗ ಅಖಿಲೇಶ್ ಪಾಲಾಗಿರುವುದು ಮುಲಾಯಂ ಸಿಂಗ್ ಯಾದವ್ ಅವರಿಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ.
ಜನವರಿ 13 ರಂದು ನಾಜಿಂ ಜೈದಿ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ಚುನಾವಣಾ ಆಯೋಗ ಎರಡೂ ಕಡೆಯ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಅಪ್ಪ ಮತ್ತು ಮಗನಲ್ಲಿ ಸೈಕಲ್ ಯಾರ ಪಾಲಾಗಬಹುದು ಎಂದು ಎಲ್ಲಾ ಕಡೆ ಚರ್ಚೆಗಳು ಪ್ರಾರಂಭವಾಗಿತ್ತು. ಇಂದು ತೀರ್ಪು ಪ್ರಕಟಿಸಿದ ಚುಣಾವಣಾ ಆಯೋಗ ಚುಣಾವಣೆಯಲ್ಲಿ ಸೈಕಲ್ ಚಿಹ್ನೆಯನ್ನು ಅಖಿಲೇಶ್ ಯಾದವ್ ಅವರಿಗೆ ಬಳಸಲು ಅನುಮತಿ ನೀಡಿದೆ.
loading...
No comments