Breaking News

ಲ್ಯಾನ್ಸ್ ಹನುಮಂತಪ್ಪಗೆ ಮರಣೋತ್ತರ ಶೌರ್ಯ ಪ್ರಶಸ್ತಿ


ನವದೆಹಲಿ :ಸೇನಾ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿಯಾಚಿನ್ ಯೋಧ ಹನುಮಂತಪ್ಪ ಕೊಪ್ಪದ್‍ಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು.  ಸಿಯಾಚಿನ್‍ನಲ್ಲಿ ಮಂಜುಗಡ್ಡೆಗಳ ನಡುವೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ವೀರ ಮರಣವನ್ನಪ್ಪಿದ ಹನುಮಂತಪ್ಪ ಕೊಪ್ಪದ್ ಅವರಿಗೆ ನೀಡಿದ ಶೌರ್ಯ ಪ್ರಶಸ್ತಿಯನ್ನು ಸೇನೆಯ ಮುಖ್ಯಸ್ಥ ಬಿಪಿನ್ ರಾವತ್‍ರಿಂದ ಹನುಮಂತಪ್ಪರ ಪತ್ನಿ ಮಹಾದೇವಿ ಅವರು ಸ್ವೀಕರಿಸಿದರು.

loading...

No comments