ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಆತ್ಯಾಚಾರ ನಡೆಸಿದ ಎ.ಎಸ್.ಐ
ತುಮಕೂರು : ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಚಲಿಸುವ ವಾಹನದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬ ಅತ್ಯಾಚಾರವೆಸಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ವರದಿಯಾಗಿದೆ .ತುಮಕೂರು ಗ್ರಾಮಾಂತರ ಠಾಣೆಯ ಎಎಸ್‍ಐ ಉಮೇಶ್ ಇಂಥಹದ್ದೊಂದು ಕೃತ್ಯವೆಸಗುವ ಮೂಲಕ ಪೊಲೀಸ್ ಇಲಾಖೆಗೆ ಕಳಂಕ ತಂದಿದ್ದಾರೆ.
ಶನಿವಾರ ರಾತ್ರಿ ಮನೆಯಿಂದ ಹೊರಹೋಗಿದ್ದ 20 ವರ್ಷದ ಯುವತಿಯನ್ನು ಮನೆಗೆ ಬಿಡುವುದಾಗಿ ಹೇಳಿದ್ದ ಎಎಸ್‍ಐ ಉಮೇಶ್ ಖಾಸಗಿ ಬೊಲೆರೋ ವಾಹನದಲ್ಲಿ ಅತ್ಯಾಚಾರವೆಸಗಿದ್ದ. ಆಕಸ್ಮಿಕವಾಗಿ ಅಂತರಸನಹಳ್ಳಿ ಮಾರುಕಟ್ಟೆಗೆ ಬಂದಿದ್ದ ಖಾಸಗಿ ವಾಹನದ ಚಾಲಕ ಈಶ್ವರನ್ನು ಬಳಸಿಕೊಂಡು ಕಾರಿನಲ್ಲಿ ಅತ್ಯಾಚಾರವೆಸಗಿದ್ದ. ಬಳಿಕ ಆತನೇ ಯುವತಿ ತಾಯಿ ವರಲಕ್ಷ್ಮೀ ಮತ್ತು ಅಣ್ಣ ಮಂಜುನಾಥ್‍ಗೆ ಫೋನ್ ಮಾಡಿ ಯುವತಿಯನ್ನು ಮನೆಗೆ ಬಿಟ್ಟು ಬಂದಿದ್ದ.
ಅತ್ಯಾಚಾರ ವಿಚಾರ ತಿಳಿಯುತ್ತಿದ್ದಂತೆ ತುಮಕೂರು ಜಿಲ್ಲಾ ಎಸ್‍ಪಿ ಇಶಾಪಂತ್ ಯುವತಿಯ ಜೊತೆಗೆ ಎಎಸ್‍ಐ ಉಮೇಶ್‍ನನ್ನು ಸಹ ವಿಚಾರಣೆಗೊಳಪಡಿಸಿ ಕೂಡಲೇ ಆತನನ್ನು ಸೇವೆಯಿಂದ ಅಮಾನತು ಮಾಡಿ ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರವಾಗಿರುವುದು ಧೃಢಪಟ್ಟಿದ್ದು ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
source -public-tv
loading...
No comments