Breaking News

ಸಮೀಕ್ಷೆ : ನೋಟ್ ಬ್ಯಾನ್ ಮಾಡಿದ್ದರಿಂದ ದೇಶಕ್ಕೆ ಏನಾದರು ಲಾಭವಾಯಿತೆ...???

​ಸಾವಿರ ಮತ್ತು ಐನೂರು ರೂಪಾಯಿ ನೋಟ್ ನಿಶೇಧ ಮಾಡಿರುವ ಕೇಂದ್ರ ಸರ್ಕಾರ ಕಾಳ ಧನಿಕರ ಮತ್ತು ಉಗ್ರಗಾಮಿ ಚಟುವಟಿಕೆಗಳ ವಿರುದ್ದ ಸಮರ ಸಾರೋಕೆ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೊಂಡಿದೆ. ನೋಟ್ ಬ್ಯಾನ್ ಮಾಡಿ ತಿಂಗಳುಗಳು ಉರುಳಿವೆ. ನೋಟು ನಿಶೇಧದ ಬಗ್ಗೆ ಪರ ವಿರೋಧದ ಮಾತುಗಳೂ ಜನ ಸಾಮಾನ್ಯರಿಂದ ಕೇಳಿ ಬಂದಿವೆ.
ನೋಟು ನಿಶೇಧದ ನಂತರ ವಿರೋಧ ಪಕ್ಷಗಳು ಅನೇಕ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು, ಜೊತೆಗೆ ಒಂದು ದಿನದ ಭಾರತ್ ಬಂದ್ ಕೂಡ ನಡೆದಿತ್ತು. ನೋಟ್ ಬ್ಯಾನ್ ನಿಂದಾಗಿ ಬ್ಯಾಂಕ್ ಮುಂದೆ ಹಣ ಬದಲಾವಣೆಗೆ ನಿಂತು ನೂರಕ್ಕೂ ಹೆಚ್ಚು ಜನ ಸಾವನ್ನು ಕೂಡ ಅಪ್ಪಿದ್ದರು. ದಿನಕ್ಕೊಂದು ಹೊಸ ನಿಯಮಗಳನ್ನು ಬಿಡುಗಡೆ ಮಾಡುತ್ತಿದ್ದ ಆರ್.ಬಿ.ಐ ನಿಂದ ಜನ ಗೊಂದಲಕ್ಕೂ ಒಳಗಾಗಿದ್ದರು.
ಆದರೆ ಇಷ್ಟೆಲ್ಲಾ ಘಟನೆಗಳು ಜರುಗಿದ ನಂತರ ಜನ ಸಮಾನ್ಯರಲ್ಲಿ ಕಾಡುವ ಪ್ರಶ್ನೆ ಎಂದರೆ ನೋಟು ನಿಶೇಧದ ನಂತರ ದೇಶದ ಆರ್ಥಿಕ ಸ್ಥಿತಿ ಬದಲಾಗಿದೆಯೇ, ರೈತರ ಸಮಸ್ಯೆ ನಿವಾರಣೆ ಆಗಿದೆಯೆ, ಬಚ್ಚಿಟ್ಟಿದ್ದಾರೆ ಎನ್ನಲಾದ ಲಕ್ಷ ಲಕ್ಷ ಕೊಟಿ ಕಪ್ಪು ಹಣ ಹೊರ ಬಂದಿದೆಯೇ. ನೋಟ್ ಬ್ಯಾನ್ ಮಾಡಿದ್ದರಿಂದ ನಿಜವಾಗಿಯೂ ದೇಶಕ್ಕೆ ಏನಾದರು ಲಾಭವಾಯಿತೆ..?? 
ಸುದ್ದಿ 24x7 ತಂಡ ಈ ಬಗ್ಗೆ ಸಮೀಕ್ಷೆ ಕೈಗೊಂಡಿದ್ದು. ನಿಮ್ಮ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡು ಓಟ್ ಮಾಡೋ ಮೂಲಕ ತಿಳಿಸಿ. ಜನವರಿ21 ಶನಿವಾರ ಸಂಜೆ 5ಗಂಟೆಗೆ ಈ ಸಮೀಕ್ಷೆ ಕೊನೆಗೊಳ್ಳಲಿದೆ.
loading...

No comments