Breaking News

ಎನ್ ಡಿಟಿ ಯಿಂದ ಕಾಲಕಿತ್ತ ಬರ್ಖಾ ಧತ್ಸುದ್ದಿ24×7.in    ನವದೆಹಲಿ: ವಿವಾದಿತ ಪತ್ರಕರ್ತೆ ಹಾಗೂ ಎನ್‌ಡಿಟಿವಿ (ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್)ಯ ಸಲಹಾ ಸಂಪಾದಕಿ ಬರ್ಖಾ ದತ್ ಅವರು ಭಾನುವಾರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.


ಈ ಬಗ್ಗೆ ಸ್ವತಃ ಎನ್ ಡಿವಿ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ವರದಿ ಪ್ರಕಟ ಮಾಡಿದ್ದು, ಕಳೆದ 21 ವರ್ಷಗಳಿಂದ ವಾಹಿನಿಯ ಯಶಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬರ್ಖಾ ದತ್ ಅವರ ಮುಂದಿನ ಯೋಜನೆಗೆ ಲ ಶುಭವಾಗಲಿ ಎಂದು ಹಾರೈಸಿದೆ.

ತನ್ನ ಸಂಸ್ಥೆಯ ಏಳಿಗೆಗಾಗಿ ಅವಿರತ ಶ್ರಮ ವಹಿಸಿದ ದತ್ ಅವರಿಗೆ ಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದ್ದು ಸಹಪಾಠಿಗಳು ಕೂಡ ಇವರ ಕಾರ್ಯ ವೈಖರಿಗೆ ಮೆಚ್ಚುಗೆಯ ಮಾತುಗಳು ಆಡಿದರು.

ಒಂದೆಡೆಯಲ್ಲಿ ಟೈಂ ಸ್ ನೌ ನಿಂದ ಹೊರಬಂದ ಅರ್ನಭ್ ಗೋಸ್ವಾಮಿ ತನ್ನದೆ ಆದಾ ಹೊಸ ಸುದ್ದಿ ವಾಹಿಸಿ "ರಿಪಬ್ಲಿಕ್ " ಅಂತ ಪ್ರಾರಂಭಿಸಿದು ಇದೀಗ ಧತ್ ದಿಢಿರ್ ರಾಜಿನಾಮೆ ಪತ್ರಕರ್ತರ ವಲಯದಲ್ಲಿ ಬಾರಿ ಸಂಚಲನ ಉಂಟುಮಾಡಿದ್ದು ಮೂಲಗಳ ಪ್ರಕಾರ ಧತ್ ಅವರು ಹೊಸ ಉದ್ಯಮ ನಡೆಸುವ ಓಲವು ತೊರುತ್ತಾ ಇದ್ದಾರೆ ಎಂದು ತಿಳಿದ್ದು ಬಂದಿದೆ.

ಇತ್ತ ರಾಜಿನಾಮೆ ನೀಡುತ್ತಿದಂತೆ ಟ್ವಿಟರ್ ನಲ್ಲಿ ಬಾರಿ ಸಂಚಲನ ಮೂಡಿದೆ ಒಂದೆಡೆ ಅರ್ನಭ್ ರಿಪಬ್ಲಿಕ್ ಆದರೆ ಅದಕ್ಕೆ ವಿರುದ್ಧವಾಗಿ ಧತ್ ಅವರ ನ್ಯೂ ರಿಪಬ್ಲಿಕ್ ಅನ್ನುವ ವ್ಯಂಗ್ಯಮಯ ಟ್ವಿಟ್ ಗಳು ಹರಿದಾಡುತ್ತಾ ಇವೇ.

ಏನೆ ಆಗಲಿ ಯಾರು ಏನು ಬೇಕಾದರೂ ಮಾಡಲಿ ಆದರೆ ದೇಶದ ಜನತೆಗೆ ,ಪತ್ರಿಕಾ ಸ್ವಾತಂತ್ರ್ಯ ಕ್ಕೆ ಧಕ್ಕೆ ಬರದೆ ಜನಪರ ಕೆಲಸ ಮಾಡಲಿ ಎಂದು ನಾಗರಿಕರ ಅಭಿಮತ
loading...

No comments