Breaking News

ರೈತನ ಗೋವುಗಳಿಗೆ ವಿಷವುಣಿಸಿದ ಕಿಡಿಗೇಡಿಗಳು



ಬಳ್ಳಾರಿ : ರೈತರೊಬ್ಬರ  ಹಸುಗಳಿಗೆ ಕೆಲ ಕಿಡಿಗೇಡಿಗಳು ವಿಷ ಉಣಿಸಿದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಪಟ್ಟಣದಲ್ಲಿ ವರದಿ ಆಗಿದೆ .ಬದಾಮಿಗೌಡರು ಸ್ವಂತ ಜಮೀನು ಇಲ್ಲದಿದ್ದರೂ 4 ಎಕರೆ ಭೂಮಿಯನ್ನು ಲೀಸ್ ಪಡೆದು ಹೈನುಗಾರಿಕೆ ಉದ್ಯಮ ನಡೆಸುತ್ತಿದ್ದರು. ಕೆಲ ಕಿಡಿಗೇಡಿಗಳು ಹಸುಗಳಿಗೆ ವಿಷವುಣಿಸಿ ಸಾಯಿಸೋಕೆ ಪ್ರಯತ್ನ ಮಾಡಿದ್ದಾರೆ. ವಿಷ ಪದಾರ್ಥ ತಿಂದಿರುವ 2 ಹಸುಗಳು ಈಗಾಗಲೇ ಮೃತಪಟ್ಟರೆ ಇನ್ನೂ ಹತ್ತಾರು ಹಸುಗಳು ಇದೀಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿವೆ ಎಂದು ತಿಳಿದುಬಂದಿದೆ .



loading...

No comments