ಸಾಯುವ ಮುಂಚೆ ಪ್ರವೀಣ್ ವರ್ವಾಡಿ ಹತ್ಯೆಗೈದಿದ್ದ ವ್ಯಕ್ತಿ ಯಾರು ?
ಉಡುಪಿ :ಹಿರಿಯಡ್ಕ ಪೋಲೀಸ್ ಠಾಣಾ ವ್ಯಾಪ್ತಿಯ ಕೋಟನಕಟ್ಟೆ ಬಳಿ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಪ್ರವೀಣ್ ಕುಲಾಲ್ (45) ಹತ್ಯೆ ಮಾಡಲಾಗಿತ್ತು .ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು .ಇದೀಗ ನಡೆದ ಬೆಳವಣಿಗೆಯಲ್ಲಿ ಪ್ರವೀಣ್ ವರ್ವಾಡಿ ಕೊಲೆಯಾಗುವ ಮುನ್ನ ಮತ್ತೊಬ್ಬನನ್ನು ಕಿಡ್ನ್ಯಾಪ್ ಮಾಡಿ ಕೊಂದೇ ಬಿಟ್ಟಿದ್ದ ಎಂಬ ಮಾಹಿತಿ ಹೊರ ಬಿದ್ದಿದೆ . ಪ್ರವೀಣ್ ಕುಲಾಲ್ ಕೊಲೆಯಾಗುವ 20 ದಿನಗಳ ಹಿಂದೆ ಉಡುಪಿಯ ಸಣ್ಣಕ್ಕಿಬೆಟ್ಟುವಿನ ಸಂತೋಷ್ ನಾಯಕ್ ಎಂಬಾತನನ್ನು ಮನೆಯಿಂದ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ವಿಚಾರ ಈಗ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.ಸಂತೋಷ್ ನಾಯಕ್ ಸ್ಥಳೀಯ ಉದ್ಯಮಿಗಳಿಂದ 8 ಕೋಟಿ ರೂಪಾಯಿಯನ್ನು ತೆಗೆದುಕೊಂಡು ವಾಪಾಸ್ ಕೊಟ್ಟಿರಲಿಲ್ಲ. ಕಾಸು ವಸೂಲಿಗಾಗಿ ಆ ಉದ್ಯಮಿಗಳು ವರ್ವಾಡಿ ಪ್ರವೀಣ್ ಕುಲಾಲ್‍ಗೆ ಡೀಲ್ ಕೊಟ್ಟಿದ್ದರು. ಪ್ರವೀಣ ಸಂತೋಷ್ ಕುಲಾಲ್‍ಗೆ ಕಾಡಿಸಿ- ಪೀಡಿಸಿದರೂ ಹಣ ಸಿಗಲಿಲ್ಲ. ಡಿಸೆಂಬರ್ 3ಕ್ಕೆ ಸಂತೋಷನನ್ನು ಮನೆಯಿಂದ ಕಿಡ್ನ್ಯಾಪ್ ಮಾಡಿ ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟಿದ್ದಾರಂತೆ. ಹಣದ ಅವ್ಯವಹಾರದಿಂದ ಕಿಡ್ನ್ಯಾಪ್ ನಡೆದಿದ್ದು ನಂತರ ಕೊಲೆ ಮಾಡಿರಬಹದು ಎಂದು ಪೊಲೀಸರು ಈಗ ಶಂಕಿಸಿದ್ದಾರೆ.ಈ ಪ್ರಕರಣ ಬಗ್ಗೆ ಪೊಲೀಸರು ತನಿಖೆ ಮುಂದು ವರಿಸಿದ್ದಾರೆ ಎಂದು ತಿಳಿದು ಬಂದಿದೆ
No comments