Breaking News

ಇಹಲೋಕ ತ್ಯಜಿಸಿದ ಬಾಳಿಗಾ ತಾಯಿ


ಮಂಗಳೂರು : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ತಾಯಿ ಜಯಂತಿ  ಬಾಳಿಗಾ  (81) ಮನೆಯಲ್ಲಿ  ಕುಸಿದು ಬಿದ್ದು ತಲೆಗೆ ಏಟು ಬಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು  ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ .ಮೃತರು ಪತಿ ಬಿ ರಾಮಚಂದ್ರ ಬಾಳಿಗ, ನಾಲ್ಕು ಹೆಣ್ಣು ಮಕ್ಕಳಾದ ಶ್ವೇತಾ, ಆಶಾ, ಅನು ಮತ್ತು ಹರ್ಷಾರನ್ನು ಅಗಲಿದ್ದಾರೆ. ಜಯಂತಿ ಬಾಳಿಗಾ ಅವರ ಕಣ್ಣನ್ನು ದಾನ ಮಾಡಿದ ಕುಟುಂಬಸ್ಥರು ಹೃದಯವಂತಿಕೆ ಮೆರೆದಿದ್ದಾರೆ ,. ವಿನಾಯಕ ಬಾಳಿಗಾ ಸಾವಿನ ಬಳಿಕ ಮಾನಸಿಕವಾಗಿ ಜಯಂತಿ  ಬಾಳಿಗಾ ಕುಗ್ಗಿ ಹೋಗಿದ್ದರು ಎಂದು ಹೇಳಲಾಗಿದೆ 

No comments