Breaking News

ನನ್ನೊಂದಿಗೆ ಮಲಗಿದ್ರೆ ನೌಕರಿ ಸಿಗುತ್ತೆ ಎಂದ ಕೀಚಕ ಜ್ಯೋತಿಷಿ



ಮಂಗಳೂರು : ಜ್ಯೋತಿಷ್ಯ ಹೇಳುವ ವಿಚಾರದಲ್ಲಿ ಜನರನ್ನು  ಮರುಳು ಮಾಡಿ ಮೋಸ ಮಾಡುವ ಜನ ಹೆಚ್ಚಾಗಿ ಇಂದಿನ ಸಮಾಜದಲ್ಲಿ ಕಾರ್ಯಾಚರಿಸುತಿದ್ದಾರೆ,ದೋಷ ನಿವಾರಣೆ ನೆಪದಲ್ಲಿ ಯುವತಿಯನ್ನು ನೇರವಾಗಿ ಮಂಚಕ್ಕೆ ಕರೆದ ಜ್ಯೋತಿಷಿಯೊಬ್ಬ ಪೊಲೀಸ್ ಬಲೆಗೆ ಬಿದ್ದಿದ್ದಾನೆ.ಬಂಧಿತ ಆರೋಪಿ  ಲೋಕೇಶ್ ಅಲಿಯಾಸ್ ರಾಮಚಂದ್ರ ಶರ್ಮ. ಈತ ಮೂಲತಃ ಕೇರಳದವನಾಗಿದ್ದು, ಮಂಗಳೂರಿನ ಅತ್ತಾವರದಲ್ಲಿ ಕಳೆದ 20 ವರ್ಷಗಳಿಂದ ವೈಷ್ಣವಿ ಜ್ಯೋತಿಷ್ಯಾಲಯ ಹೆಸರಲ್ಲಿ ಕಚೇರಿ ನಡೆಸುತ್ತಿದ್ದ.ಸಮಸ್ಯೆ ಹೇಳಿಕೊಂಡು  ಬಂದವರಿಗೆ ಯಾಮಾರಿಸಿ 10 ರಿಂದ 15 ಸಾವಿರ ರೂಪಾಯಿ ಬಿಲ್ ಮಾಡಿ ದೋಷ ಪರಿಹಾರಾರ್ಥ ಹೋಮ, ಹವನ ನಡೆಸುತ್ತಿದ್ದ. ಕೊನೆಗೆ ಸಮಸ್ಯೆ ಪರಿಹಾರ ಆಗದೇ ಇದ್ದರೆ ಅದಕ್ಕೆ ಬೇರೆಯದೇ ಆದ ಮಾರ್ಗವಿದೆ ಅನ್ನುತ್ತಾ ಮತ್ತೊಂದಷ್ಟು ಬಿಲ್ ಮಾಡಿ ವಂಚಿಸುತ್ತಿದ್ದ.
ಇದೇ ರೀತಿ ಉದ್ಯೋಗ ಸಿಗದೆ ಪರಿತಪಿಸುತ್ತಿದ್ದ ಯುವತಿಯೊಬ್ಬಳು ದೋಷ ನಿವಾರಣೆಗೆ ಹೋಮ ನಡೆಸಿದರೂ ಸಮಸ್ಯೆ ನೀಗಲಿಲ್ಲ ಎಂಬ ಕಾರಣಕ್ಕೆ ಹಣ ಮರಳಿಸುವಂತೆ ದುಂಬಾಲು ಬಿದ್ದಿದ್ದರು. ಇದಕ್ಕೆ ಆತ ಕೊನೆಯ ಮಾರ್ಗವಾಗಿ ನೀನು ಒಂದು ದಿನದ ಮಟ್ಟಿಗೆ ಬ್ರಾಹ್ಮಣರೊಬ್ಬರ ಜೊತೆ ಮಲಗಬೇಕು. ಅಲ್ಲದೆ ಇದು ಕಾಮದ ವಿಚಾರವಲ್ಲ. ನೀನು ಮಗಳಂತೆ, ಸಮಸ್ಯೆ ನಿವಾರಣೆಗೆ ಇದು ಅನಿವಾರ್ಯ ಎಂದು ಸಲಹೆ ನೀಡಿದ್ದ. ಇದರಿಂದ ಬೇಸತ್ತ ಯುವತಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಹಣ ಮರಳಿಸುವಂತೆ ಕೇಳಲು ಹೋಗಿದ್ದಾಗ, ಬ್ರಾಹ್ಮಣ ಸ್ವಾಮೀಜಿ ಇದ್ದಾರೆ. ಸಮಸ್ಯೆಗೆ ವಿಶೇಷ ಪರಿಹಾರ ನೀಡ್ತಾರೆ ಅಂತಾ ನಂಬಿಸಿದ ಜ್ಯೋತಿಷಿ, ಸ್ವಾಮೀಜಿಯನ್ನು ಪರಿಚಯಿಸಿದ್ದಾನೆ. ಆನಂತರ ಸ್ವಾಮೀಜಿ ಯುವತಿಯ ಹೊಕ್ಕುಳಿಗೆ ಭಸ್ಮ ಹಾಕಬೇಕು, ಅಂಗಿ ಮೇಲೆತ್ತುವಂತೆ ಒತ್ತಾಯಿಸಿದ್ದ ಅನ್ನೋ ವಿಚಾರವೂ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರನ್ನು ಮಗುವಾಗದ ಸಮಸ್ಯೆ ಹೇಳಿಕೊಂಡು ಜ್ಯೋತಿಷಿ ಬಳಿಗೆ ಕಳಿಸಿದ್ದರು. ಅದಕ್ಕೆ ಜ್ಯೋತಿಷಿ ತನ್ನಲ್ಲಿ ಸಂತಾನ ಪ್ರಾಪ್ತಿ ಯಂತ್ರವಿದೆಯೆಂದು ಹೇಳಿ 12 ಸಾವಿರ ಬಿಲ್ ಹೇಳಿದ್ದ. ಈ ಕಾರಣದಿಂದ ನರೇಂದ್ರ ನಾಯಕ್, ಜ್ಯೋತಿಷಿ ವಿರುದ್ಧ ವಾರದ ಹಿಂದಷ್ಟೇ ಪಾಂಡೇಶ್ವರ ಠಾಣೆಗೆ ಐಪಿಸಿ ಸೆಕ್ಷನ್ 420 ಮತ್ತು 506ರ ಅಡಿ ಕೇಸು ದಾಖಲಿಸಿದ್ದರು. ಇದರಂತೆ ಪೊಲೀಸರು ಜ್ಯೋತಿಷಿ ರಾಮಚಂದ್ರ ಶರ್ಮನನ್ನು ಬಂಧಿಸಿದ್ದಾರೆ.

source public tv

No comments