Breaking News

ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಗಾಯತ್ರಿಗೆ ಜಾಮೀನು ನಿರಾಕರಣೆಮಂಗಳೂರು : ವಿಶೇಷ ಭೂಸ್ವಾಧಿನಾಧಿಕಾರಿ  ಗಾಯತ್ರಿ ನಾಯಕ್ ಅವರು ತಮ್ಮ ಕಚೇರಿಯಲ್ಲಿ  ವ್ಯಕ್ತಿಯೊಬ್ಬರಿಂದ  ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ  ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ದಾಳಿ ನಡೆಸಿ ಗಾಯತ್ರಿ ನಾಯಕ್ ಅವರನ್ನು    ಬಂಧಿಸಿದ್ದರು. ಗಾಯತ್ರಿ ನಾಯಕ್ ಹಾಗೂ ಅವರ ಸಹಾಯಕ ತುಕ್ರಪ್ಪ ಸಲ್ಲಸಿದ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಮೂರನೇ ಸೆಷನ್ಸ್ ನ್ಯಾಯಾಲಯ ಶನಿವಾರ ವಜಾ ಮಾಡಿದೆ.

ಜಾಮೀನು ಅರ್ಜಿಯ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರಾದ ಉಮಾಪತಿ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದರು. ಇದೀಗ ಮತ್ತೆ ಅವರನ್ನು ಜ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆದರೆ ಈ ನಡುವೆ ಅಸೌಖ್ಯದ ಕಾರಣದ ಹಿನ್ನೆಲೆಯಲ್ಲಿ ಗಾಯತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

No comments