Breaking News

ಸಂತೋಷ ನಾಯಕ್ ಕೊಲೆ ಆರೋಪಿಗಳು ಪೋಲೀಸರ ಬಲೆಗೆ

ಉಡುಪಿ : ಉಡುಪಿಯ ಸಣ್ಣಕ್ಕಿಬೆಟ್ಟುವಿನ ಸಂತೋಷ್ ನಾಯಕ್  ಕೊಲೆ ಪ್ರಕರಣ ಸಂಬಂಧ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ .ಬಂಧಿತ ಆರೋಪಿಗಳನ್ನು ಯರ್ಲಪಾಡಿ ಪ್ರಸಾದ್(24), ಮಂಗಳೂರಿನ ದಯಾನಂದ (40), ಉಡುಪಿಯ ವಿಲ್‍ಫ್ರೆಡ್ ಆರ್ಥರ್(42), ಹಿರಿಯಡ್ಕ ಜಯಂತ್ ಪೈ(58), ಪೆರ್ಣಂಕಿಲ ಕೃಷ್ಣ(30), ಮಹೇಶ್ ಆಚಾರಿ(26), ರಮೇಶ್(30), ಎಂದು ಗುರುತಿಸಲಾಗಿದೆ .
ಘಟನೆಯ ವಿವರ
ಉಡುಪಿಯ ಸಣ್ಣಕ್ಕಿಬೆಟ್ಟು ಸಂತೋಷ್ ನಾಯಕ್ ಮಣಿಪಾಲದಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತಿದ್ದ,  ಹಣಕಾಸಿನ ಅವ್ಯವಹಾರದಲ್ಲಿ ಯಾಮರಿಸಿ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಎತ್ತಿದ ಕೈ ಆಗಿದ್ದ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ ಮಾಡಿದ ವಿಷಯಕ್ಕೆ ಸಂಬಂಧಿಸಿ ಸಂತೋಷ ನಾಯಕ್ ಕಿಡ್ನ್ಯಾಪ್ ನಡೆದಿತ್ತು .ಸಂತೋಷ್ ಕಾಣೆಯಾಗಿ ತಿಂಗಳಾದ್ರೂ ಮನೆಗೆ ಬಾರದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇದ್ದರು . ಬ್ರಹ್ಮಾವರ ಇನ್ಸ್ ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ಪ್ರಕರಣವನ್ನು ತನಿಖೆ ಮಾಡಲಾಯಿತು ಪ್ರಾಥಮಿಕ ತನಿಖೆಯಲ್ಲಿ  ಡಿಸೆಂಬರ್ ೧೯ ರಂದು ಕೊಲೆಯಾದ ರೌಡಿ ಶೀಟರ್ ಪ್ರವೀಣ್ ಕುಲಾಲ್ ಕೈವಾಡ ಇದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿತ್ತು.ನಂತರದ ಬೆಳವಣಿಗೆಯಲ್ಲಿ ಹಿರಿಯಡ್ಕ ಮತ್ತು ಮಣಿಪಾಲ ಪೊಲೀಸರು ಕಾರ್ಯಾಚರಣೆ ಮಾಡಿ ಸಂತೋಷ್ ನಾಯಕ್ ಕೊಲೆಯಲ್ಲಿ ಬಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ . ಪೊಲೀಸರ ಕಣ್ತಪ್ಪಿಸುವ ಉದ್ದೇಶದಿಂದ ಆರೋಪಿಗಳು ಬೊಮ್ಮರಬೆಟ್ಟು ಕಾಡಲ್ಲಿ ಕರುವೊಂದನ್ನು ಸುಟ್ಟು, ಸಂತೋಷ್ ನಾಯಕ್‍ನ ಹೆಣವನ್ನು ಚೂರು ಚೂರು ಮಾಡಿ ಕಾಡಿನ ನಡುವೆ ಇರುವ ಪಾಳುಬಾವಿಗೆ ಎಸೆದಿದ್ದರು. ಈ ಮೂಲಕ ಸೇಫ್ ಆಗ್ಬಹುದು ಎಂದು ಲೆಕ್ಕಾಚಾರ ಹಾಕಿದ್ದರು.ಪೋಲೀಸರ ಕಾರ್ಯಾಚರಣೆ ಆರೋಪಿಗಳ ಲೆಕ್ಕಾಚಾರವನ್ನು ಉಲ್ಟಾ ಪಲ್ಟಾ ಮಾಡಿದೆ .

No comments