Breaking News

"ಸೂಲಿಬೆಲೆ ಕಾರ್ಯಕ್ರಮ ವಿವಾದ " ಆತ್ಮಹತ್ಯೆಗೆ ಶರಣಾದ ಎಬಿವಿಪಿ ಕಾರ್ಯಕರ್ತ !


ಚಿಕ್ಕಮಗಳೂರು :ನಗರದ ಜೆಸಿಬಿಎಮ್ ಕಾಲೇಜಿನ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ (೨೧) ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ಶೃಂಗೇರಿಯಲ್ಲಿ  ವರದಿ ಆಗಿದೆ . ಕಾಲೇಜಿನಲ್ಲಿ ಜನವರಿ 7 ರಂದು ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಆಗಮನವನ್ನು ಎನ್‌ಎಸ್‌ಯುಐ ವಿರೋಧಿಸಿತ್ತು ಮತ್ತು ಸೂಲಿಬೆಲೆ  ಬರದಂತೆ ಎನ್‌ಎಸ್‌ಯುಐ ಸುದ್ದಿಗೋಷ್ಠಿ ನಡೆಸಿತ್ತು.ಈ ಸಂಬಂಧ ಎಬಿವಿಪಿ ಮತ್ತು ಎನ್‌ಎಸ್‌ಯುಐ  ನಡುವೆ ಮಾರಾಮಾರಿ ನಡೆದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಬಿವಿಪಿ ನಾಲ್ವರ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು. ಇದರಲ್ಲಿ ಅಭಿಷೇಕ್ ಕೂಡಾ ಒಬ್ಬನಾಗಿದ್ದ. ಹೀಗಾಗಿ 'ನನ್ನ ಜೀವನ ಹಾಳಾಯ್ತು' ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ .

No comments