ಪಟಾಕಿ ಹೊಡೆದವರಿಗೆ ಪೊರಕೆ ನೀಡಿ ಸ್ವಚ್ಛ ಗೊಳಿಸಿದ ಅಣ್ಣಾಮಲೈ?
ಚಿಕ್ಕಮಗಳೂರು : ನಗರದ ಐ.ಜಿ.ರಸ್ತೆಯಲ್ಲಿರುವ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ "ಲೀ' ಕನ್ನಡ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು ಅಭಿಮಾನಿಗಳು ಚಿತ್ರಮಂದಿರದ ಎದುರು ಪಟಾಕಿ ಸಿಡಿಸಿ ಕೇಕೆ ಹಾಕುತಿದ್ದರು ಇದೆ ಸಂದರ್ಭದಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಎಸ್.ಪಿ. ಅಣ್ಣಾಮಲೈ ತೆರಳುತ್ತಿದ್ದಾಗ ಇದನ್ನು ಗಮನಿಸಿದ ಅಣ್ಣಾಮಲೈ ತಮ್ಮ ವಾಹನ ನಿಲ್ಲಿಸಿ ಸ್ಥಳಕ್ಕೆ ತೆರಳಿದರು. ಪಟಾಕಿ ಸಿಡಿಸಲು ಅನುಮತಿ ನೀಡಿದ್ದು ಯಾರು? ಪಟಾಕಿ ಸಿಡಿಸಿ ನೀವು ಹೋಗುತ್ತೀರ, ರಸ್ತೆ ಸ್ವಚ್ಛ ಗೊಳಿಸುವವರು ಯಾರು ಎಂದು ಪ್ರಶ್ನಿಸಿದರು. ಅಭಿಮಾನಿಗಳು ನಾವು ಪಟಾಕಿ ಸಿಡಿಸಿಲ್ಲ ಎಂಬ ಸಮರ್ಥನೆಗೆ ಮುಂದಾದಾಗ ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿ ಎಂದು ಪೊಲೀಸರಿಗೆ ಸೂಚಿಸಿದರು ನಂತರದ ಬೆಳವಣಿಗೆಯಲ್ಲಿ ಅಣ್ಣಾಮಲೈ ಆದೇಶಕ್ಕೆ ತಲೆಬಾಗಿದ ಅಭಿಮಾನಿಗಳು ರಸ್ತೆಯನ್ನು ಸ್ವಚ್ಛಗೊಳಿಸಿದರು ಎಂದು ತಿಳಿದು ಬಂದಿದೆ
loading...
No comments