Breaking News

ಅಯ್ಯಪ್ಪ ಭಕ್ತರ ಕಾರಿಗೆ ಬೆಂಕಿ ಮಾನವಿಯತೆ ಮೆರೆದ ಕಾಂಗ್ರೆಸ್ ಸಚಿವಸುದ್ದಿ24×7.in:- ಮಂಗಳೂರು (ಜ:14) ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಅಯ್ಯಪ್ಪ ಭಕ್ತರ ಕಾರಿಗೆ ತಾಂತ್ರಿಕ ದೋಷದ ನಿಮಿತ್ತ. ಬೆಂಕಿ ಹೊತ್ತಿಕೊಂಡು ಭಸ್ಮವಾದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.

ಈ ಸಂದರ್ಭದಲ್ಲಿ ಮುಂಬೈನಿಂದ ಸ್ಥಳಿಯ ಕಾರ್ಯಕ್ರಮಕ್ಕೆ ಎಂದು ವಿಮಾನದಲ್ಲಿ ಬಂದ ಸಚಿವ ಖಾದರ್ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಕೆಲವೇ ದೂರದಲ್ಲಿ ಅಯ್ಯಪ್ಪ ಭಕ್ತರ ಕಾರಿಗೆ ಬೆಂಕಿ ತಗುಲಿದನ್ನು ಕಂಡ ಸಚಿವರು ಕೂಡಲೆ ವಾಹನ ನಿಲ್ಲಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು ಕೂಡಲೆ ಅಗ್ನಿಶಾಮಕ ದಳಕ್ಕೆ ಪೋನ್ ಮಾಡಿದರು .

ಅಷ್ಟು ಹೊತ್ತಿಗೆ ಬೆಂಕಿಯ ತೀವ್ರತೆ ಗೆ ಕಾರು ಸಂಪೂರ್ಣ ಭಸ್ಮವಾಗಿದ್ದು ಭಕ್ತರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಭಕ್ತರೆಲ್ಲರು ಧಾರವಾಡದ ಕುಂದಗೋಳದವರು ಎಂದು ತಿಳಿದು ಬಂದಿದೆ.

 ಅಯ್ಯಪ್ಪ ಭಕ್ತರು ಕಾರಿನಲ್ಲಿ ವಾಪಸಾಗುತ್ತಿದ್ದ ವೇಳೆ ಪಂಪ್‍ವೆಲ್-ನಂತೂರ್ ಸರ್ಕಲ್ ಬಳಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ಮುಂಬೈನಿಂದ ವಿಮಾನದಲ್ಲಿ ಬಂದಿಳಿದ ಸಚಿವ ಖಾದರ್ ಅವರು ಬೋಳಿಯಾರ್ನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು.

ಇದೆಲ್ಲದರ ಮಧ್ಯೆ ಸ್ವತಃ ಸಚಿವರೆ ಭಕ್ತರಿಗೆ  ಊಟದ ವ್ಯವಸ್ಥೆ ಕಲ್ಪಿಸಿ ಪ್ರಯಾಣ ಮುಂದುವರಿಸಲು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಟಿಕೆಟ್ ದೊರಕಿಸಿಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.


 ಸಚಿವ ಖಾದರ್ ಅವರು ಈ ಮಾನವೀಯತೆಗೆ ಇಡೀ ಕರಾವಳಿಯ ಜನ ಅಭಿನಂದಿಸಿದ್ದು ಕರ್ತವ್ಯ ಪ್ರಜ್ಞೆ ಮೆರೆದ ಸಚಿವರಿಗೆ ಬೇರೆ ಬೇರೆ ರೀತಿಯಲ್ಲಿ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದ್ದುಬಂದಿದೆ.
 ಹಿಂದೆಯೂ ಅಪಘಾತವಾದ ಸಂದರ್ಭದಲ್ಲಿ ಬೆಂಗಳೂರು ಹಾಗೂ ಇತರೆಡೆ ತಾವೇ ಖುದ್ದು ನೆರವಾಗುವ ಕಾರ್ಯಗಳನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದರು.
loading...

No comments