Breaking News

ದೇಶದ ಮೊದಲ ಹೈಟೆಕ್ ಮೀನು ಮಾರುಕಟ್ಟೆ ಉದ್ಘಾಟನೆ ಎಲ್ಲಿ ಅಂತೀರಾ ಈ ವಿಶೇಷ ವರದಿ ನೋಡಿ


ಸುದ್ದಿ24×7.in :-ಉಡುಪಿ ಅಂದ ತಕ್ಷಣ ಎಲ್ಲರಿಗೂ ನೆನಪು ಆಗೊದು ಶ್ರೀ ಕೃಷ್ಣ ಮಠ ದೇವರ ನಾಡು ಪ್ರವಾಸಿ ತಾಣಗಳ ಪೈಕಿ ಉಡುಪಿ ಕೂಡ ಅಗ್ರಗಣ್ಯ .

ಈಗ ಈ ಉಡುಪಿ ಮತ್ತೆ ಸುದ್ದಿಯಲ್ಲಿ ಆದರೆ ಈ ಬಾರಿಗೆ ಸುದ್ದಿಯಾಗಿದ್ದು ಮಾತ್ರ ಬಹು ಅಪರೂಪದ ವಿಷಯದಲ್ಲಿ .
ದೀ ಡಾ ವಿಸ್ ಆಚಾರ್ಯ ಅವರ  ಮುಂದಾಳತ್ವದಲ್ಲಿ ಉಡುಪಿಯಲ್ಲಿ ಒಂದು ಸುಸಜ್ಜಿತ ಮೀನು ಮಾರುಕಟ್ಟೆಯ ಶಂಕುಸ್ಥಾಪನೆ ನಡೆದಿತ್ತು ಆದರೆ ಅದು ಕೇವಲ ಶಂಕುಸ್ಥಾಪನೆಗೆ ಸೀಮಿತಗೊಂಡಿತ್ತು ಕಾರಣ ಸ್ಥಳೀಯ ರಾಜಕಾರಣಕ್ಕೆ ಮಾರುಕಟ್ಟೆ ಕೇವಲ ನೆನಪು ಮಾತ್ರ ಅನ್ನುವ ಸ್ಥಿತಿಗೆ ಬಂದು ತಲುಪಿತ್ತು ಆದರೆ ಕಳೆದ ಆರು ತಿಂಗಳ ಹಿಂದೆ ಸ್ಥಳೀಯ ಶಾಸಕರಾದ ಮಾನ್ಯ ಪ್ರಮೊದ್ ಮದ್ವರಾಜ್ ಅವರಿಗೆ ಸಚಿವ ಸ್ಥಾನ ದೊರಕುವ ಮುಖೇನಾ‌ ಈ ಮಾರುಕಟ್ಟೆಗೆ ಪುನರ್ಜನ್ಮ  ಸಿಕ್ಕ ಹಾಗೆ ಆಯಿತ್ತು .

 ಸಚಿವರಾದ ಮೇಲೆ ಮದ್ವರಾಜ್ ಅವರು ಈ ಕಾಮಗಾರಿಯ ಪರಿಶೀಲನೆ ನಡೆಸಿದರು ಕಾಮಗಾರಿ ನಿಧಾನಗತಿ ಕಂಡು ಇಂಜಿನಿಯರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಹಾಗೂ ಅವರಿಗೆ ಕೆಲಸ ಪೂರ್ಣ ಗೊಳಿಸಲು ದಿನಾಂಕ ನಿಗದಿ ಪಡಿಸಿದ್ದು ಅದರ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಕೂಡ ಇಂಜಿನಿಯರ್ ನೀಡಿದ್ದು ಇದೀಗ ಆ ಕಾಮಗಾರಿ ಪೂರ್ಣಗೊಂಡು ಜನವರಿ14 ರಂದು ರಾಜ್ಯಸಭಾ ಸದಸ್ಯರಾದ ಮಾನ್ಯ ಆಸ್ಕರ್ ಪೆರ್ನಾಂಡಿಸ್ ಅವರು ಉದ್ಘಾಟನೆ ಮಾಡಿದರು .

ಈ ಮೂಲಕ ದೇಶದ ಮೊದಲ ಸುಸಜ್ಜಿತ ಮೀನು ಮಾರುಕಟ್ಟೆ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದೆ .

ಈ ಮಾರುಕಟ್ಟೆ ವಿಶೇಷತೆಗಳು ಎನೆಂದರೆ ಮಾರಾಟಗಾರರಿಗೆ ಪ್ರತ್ಯೇಕ ಕೌಟಂರ್ ವ್ಯವಸ್ಥೆ ಮಾಡಲಾಗಿದ್ದು ಜನಸಂದಣಿ ಕಡಿಮೆ ಮಾಡಲು ಇದು ಸಹಕಾರಿಯಾಗಿದೆ . ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲು ಪ್ಯಾನ್, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದದು ಮೀನಿ ಗುಜರಾತ್ ಅನ್ನುವ ಮಾತುಗಳು ಕೇಳಿಬರುತ್ತಾ ಇವೇ .

ಏನೇ ಆಗಲಿ ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಮಾರುಕಟ್ಟೆ ಮುಂದೆಯೂ ಹೇಸರುವಾಸಿಯಾಗಿರುವುದರಲ್ಲಿ ಅನುಮಾನವಿಲ್ಲ

loading...

No comments