Breaking News

ಫೇಸ್ಬುಕ್ ನಲ್ಲಿ ವಿಡಿಯೋ ಹಾಕಿ ಹಣ ಗಳಿಸಿ



ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ವಿಡಿಯೋಗಳ ಮಧ್ಯದಲ್ಲಿ ಜಾಹಿರಾತುಗಳನ್ನು ತೋರಿಸಲು ಚಿಂತಿಸುತ್ತಿದ್ದು, ಅದರಿಂದ ಬಂದ ಆದಾಯದಲ್ಲಿ ಶೇಕಡಾ 55ರಷ್ಟನ್ನು ಪ್ರಕಾಶಕರಿಗೆ ನೀಡಲು  ಮುಂದಾಗಿದೆ ಎಂದು ವರದಿ ಒಂದು ಹೇಳಿದೆ .
ಕಂಪನಿಯು ಹೊಸದಾದ 'ಮಿಡ್ ರೋಲ್' ಜಾಹಿರಾತು ಬಿತ್ತರಿಸುವ ವಿಧಾನಗಳ ಬಗ್ಗೆ ಪರೀಕ್ಷಿಸುತ್ತಿದ್ದು, ಅದು ವಿಡಿಯೊ ಪ್ರಕಾಶಕರು ತಮ್ಮ ವಿಡಿಯೊಗಳ ನಡುವೆ ಕನಿಷ್ಟ 20 ಸೆಕೆಂಡುಗಳ ಜಾಹಿರಾತುಗಳನ್ನು ಅಳವಡಿಸಲು ಅವಕಾಶ ನೀಡುತ್ತದೆ ಎಂದು ರಿ/ಕೋಡ್ ವರದಿ ಮಾಡಿದೆ.
ಜಾಹಿರಾತುಗಳು ವಿಡಿಯೋಗಳ ಮೇಲೆ ಪಾಪ್ ಅಪ್ ಆಗುವ ಅವಕಾಶ ಸಹ ಇದ್ದು, ಅದು ಕನಿಷ್ಟ 90 ಸೆಕೆಂಡುಗಳವರೆಗೆ ಪ್ರಸಾರವಾಗುತ್ತದೆ.
ಫೇಸ್ ಬುಕ್, ಜನರು ವಿಡಿಯೊಗಳನ್ನು ನೋಡುವುದಕ್ಕೆ ತೆಗೆದುಕೊಳ್ಳುವ ಸಮಯಕ್ಕೆ ಫೇಸ್ ಬುಕ್ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಹೊರತು ಒಟ್ಟು ವಿಡಿಯೊಗಳನ್ನು ನೋಡಿದ ಸಂಖ್ಯೆಗೆ ಅಲ್ಲ ಎಂಬುದನ್ನು ಹೊಸ ವಿಧಾನದ ಅಳವಡಿಕೆ ಸೂಚಿಸುತ್ತದೆ.


loading...

No comments