Breaking News

ಪ್ರೀತಿಸಿದ ಯುವತಿಯನ್ನು ಕೊಂದು ನೇಣಿಗೆ ಶರಣಾದ ಯುವಕ


ಮಂಗಳೂರು : ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ಭಗ್ನ ಪ್ರೇಮಿಯೊಬ್ಬ  ಪ್ರೀತಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಪಾಂಡವಗುಡ್ಡೆಯಲ್ಲಿ ನಡೆದಿದೆ. ಕೊಲೆಗೀಡಾದ ಯುವತಿಯನ್ನು ಬಂಟ್ವಾಳದ ಪುದನಗುಡ್ಡೆಯ ನಿವಾಸಿ ದಿವ್ಯ (23) ಹಾಗೂ ಯುವತಿಯನ್ನು ಕೊಲೆಗೈದು ಆತ್ಮಹತ್ಯೆಗೈದ ಯುವಕನನ್ನು ಕೊಯ್ಲದ ಕುಡಮಾಣಿ ನಿವಾಸಿ ಮೋಹನ ಪೂಜಾರಿಯವರ ಮಗ ಸುಜಿತ್ (28) ಎಂದು ಗುರುತಿಸಲಾಗಿದೆ.ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ 

No comments