17ರ ಭಗ್ನ ಪ್ರೇಮಿಯಿಂದ 13ರ ಪ್ರೇಯಸಿಯ ಹತ್ಯೆ.
ಪಶ್ಚಿಮ ಬಂಗಾಳ (ZN) : ಪಶ್ಚಿಮ ಬಂಗಾಳದ ಆಲಿಪರ್ದೂರ್ ಜಿಲ್ಲೆಯ ಚಕ್'ಚಕ ಗ್ರಾಮದಲ್ಲಿ 17ವರ್ಷದ ಯುವಕನೋರ್ವ ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ 13ರ ಹರೆಯದ ಬಾಲಕಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡಿರುವ ಯುವಕ ಶ್ಯಾಮ್ ಲಾಲ್ ಚೌದರಿ ತನ್ನ ನೆರೆಮನೆಯ 13ರ ಹರೆಯದ ಬಾಲಕಿಯನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದ. ಅನೇಕ ಬಾರಿ ಬಾಲಕಿಯಲ್ಲಿ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾನೆ,ಆದರೆ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಳು.
ಭಾನುವಾರ ಕೂಡ ಬಾಲಕಿ ತನ್ನ ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಯುವಕ ತಾನು ಮೊದಲೇ ನಿರ್ಧರಿಸಿಕೊಂಡು ಬಂದಿದ್ದಂತೆ ಬಾಲಕಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ನಂತರ ತಾನೂ ವಿಷ ಕುಡಿದಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿಯ ಮೃತದೇಹ ಮನೆ ಹಿಂಭಾಗದ ನದಿ ತಟದಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಯುವಕನಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
loading...
No comments