Breaking News

ಡೊನಾಲ್ಡ್ ಟ್ರಂಪ್ ಆದೇಶ ಪ್ರಭಾವ ಕಾಶ್ಮೀರದ ಇಬ್ಬರು ಕ್ರೀಡಾಪಟುಗಳಿಗೆ ವೀಸಾ ನಿರಾಕರಣೆ


ನವದೆಹಲಿ : ಕಾಶ್ಮೀರದ ಇಬ್ಬರು ಕ್ರೀಡಾಪಟುಗಳಿಗೆ ಯುಎಸ್ ವೀಸಾ ನಿರಾಕರಿಸಲಾಗಿದೆ .ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅಮೆರಿಕ ಅಧಿಕಾರಿಗಳು ಇದೊಂದು ಸಾಧಾರಣ ನಿರ್ಧಾರ. ಟ್ರಂಪ್ ಆದೇಶಕ್ಕೆ ಮೊದಲೇ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ನ್ಯೂಯಾರ್ಕ್‍ನಲ್ಲಿ ವಿಶ್ವ ಸ್ನೋ ಶೂ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಲು ಅಬೀಬ್ ಖಾನ್ ಮತ್ತು ತನ್ವೀರ್ ಹುಸೇನ್ ವೀಸಾ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಳ್ಳಿ ಹಾಕಲಾಗಿತ್ತು. ಅಮೆರಿಕದ ಈಗಿನ ನೀತಿ ಪ್ರಕಾರ ವೀಸಾ ನಿರಾಕರಿಸಲಾಗಿದೆ ಎಂಬ ಕಾರಣ ನೀಡಲಾಗಿತ್ತು.  ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರ ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.


loading...

No comments