Breaking News

ಆಸ್ಟ್ರೇಲಿಯಾ ಪ್ರಧಾನಿ ಜತೆ ಟ್ರಂಪ್ ಕೋಪಗೊಂಡದ್ದು ಯಾಕೆ ?


ಅಮೇರಿಕಾ : ಕಳೆದ ಶನಿವಾರ ಅಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಜತೆ ಟ್ರಂಪ್ ಫೋನ್’ನಲ್ಲಿ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ, ಅಸ್ಟ್ರೇಲಿಯಾದ ದ್ವೀಪಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಅಮೆರಿಕಾಕ್ಕೆ ಪ್ರವೇಶ ನೀಡುವ ಬಗ್ಗೆ ಒಬಾಮಾ ಅಡಳಿತಾವಧಿಯಲ್ಲಿ ಆಗಿರುವ ಒಪ್ಪಂದದ ಬಗ್ಗೆ ಟರ್ನ್ಬುಲ್ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಟ್ರಂಪ್,  ಆ ಒಪ್ಪಂದವು ಅತೀ ಕೆಟ್ಟ ಒಪ್ಪಂದವಾಗಿದ್ದು, 2000 ಮಂದಿ ನಿರಾಶ್ರಿತರಲ್ಲಿ ಓರ್ವ ಭಯೋತ್ಪಾದಕನಾಗಿದ್ದನೆಂದು ಪಟ್ಟುಹಿಡಿದಿದ್ದಾರೆ.
ಅದಕ್ಕೆ ತಿರುಗೇಟು ನೀಡಿದ ಅಸ್ಟ್ರೇಲಿಯಾ ಪ್ರಧಾನಿ, ಒಪ್ಪಂದವು 2000 ನಿರಾಶ್ರಿತರ ಬಗ್ಗೆಯಾಗಿರದೇ, ಕೇವಲ 1250 ಮಂದಿ ನಿರಾಶ್ರಿತರಿಗೆ ಪ್ರವೇಶ ನೀಡುವ ಬಗ್ಗೆ ಆಗಿತ್ತು, ಅಮೆರಿಕಾ ತನ್ನ ಭದ್ರತೆ  ಮತ್ತು ಸುರಕ್ಷತಾ ಪ್ರಕ್ರಿಯೆಯನ್ನು ನಡೆಸಿದ ಬಳಿಕವಷ್ಟೇ ಪ್ರವೇಶಕ್ಕೆ ಸಮ್ಮತಿಸಲಾಗಿದೆ, ಎಂದು ನೆನಪಿಸಿದರು.
ಈ ವಿಚಾರದಲ್ಲಿ ಅವರಿಬ್ಬರ ನಡುವೆ ವಾಗ್ವಾದ ಮುಂದುವರೆದಾಗ, ಟ್ರಂಪ್ ಫೋನ್ ಕರೆಯನ್ನು ಸ್ಥಗಿತಗೊಳಿಸಿದ್ದಾರೆನ್ನಲಾಗಿದೆ.


loading...

No comments