Breaking News

3 ಲಕ್ಷ ಮೀರಿ ಕ್ಯಾಶ್‌ ಪಡೆಯುವ ಮುನ್ನ ಒಮ್ಮೆ ಯೋಚಿಸಿ


ನವದೆಹಲಿ: ಇನ್ನು ಮುಂದೆ ಮಿತಿ ಮೀರಿದ ನಗದು ಸ್ವೀಕರಿಸುವುದು ಸುಲಭವಲ್ಲ. ಯಾವುದೇ ವ್ಯಕ್ತಿ .3 ಲಕ್ಷ ಮೀರಿ ನಗದು ಸ್ವೀಕರಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ.
ಮಿತಿ ಮೀರಿದ ನಗದು ವಹಿವಾಟಿಗೆ ಸರ್ಕಾರ ಶೇ.100ರಷ್ಟುದಂಡ ವಿಧಿಸಲಿದೆ. ಏಪ್ರಿಲ್‌ 1ರಿಂದಲೇ ನೂತನ ನಿಯಮ ಜಾರಿಗೆ ಬರಲಿದೆ. ನೀವು .4 ಲಕ್ಷ ನಗದು ಸ್ವೀಕರಿಸಿದರೆ ಅಷ್ಟೇ ಮೊತ್ತದಷ್ಟು, ಅಂದರೆ .4 ಲಕ್ಷ ದಂಡ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು .50 ಲಕ್ಷ ನಗದು ಸ್ವೀಕರಿಸಿದರೆ .50 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್‌ಮುಖ್‌ ಅಧಿಯಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ಈ ನಿಯಮ ಸರ್ಕಾರಕ್ಕೆ, ಬ್ಯಾಂಕುಗಳಿಗೆ, ಅಂಚೆ ಕಚೇರಿ ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುವುದಿಲ್ಲ.
ವಿತ್ತ ಸಚಿವ ಅರುಣ್‌ ಜೇಟ್ಲಿ 2017-18 ಬಜೆಟ್‌ನಲ್ಲಿ .3 ಲಕ್ಷ ಮೀರಿದ ನಗದು ವಹಿವಾಟನ್ನು ನಿಷೇಧಿಸುವ ಪ್ರಸ್ತಾಪ ಮಾಡಿದ್ದರು. ಕಪ್ಪು ಹಣ ಸೃಷ್ಟಿಯ ಮೂಲವಾಗಿ­ರುವ ನಗದು ವಹಿವಾಟು ತಗ್ಗಿಸುವ ಸಲುವಾಗಿ ಈ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಜತೆಗೆ, ಈಗ ಇರುವ .2 ಲಕ್ಷ ಮೀರಿದ ನಗದು ವಹಿವಾಟಿಗೆ ಪಾನ್‌ ಕಡ್ಡಾಯ ನಿಯಮವೂ ಮುಂದುವರೆಯಲಿದೆ. ಯಾವುದೇ ವ್ಯಕ್ತಿ ನಗದು ಪಾವತಿಸಿ ದುಬಾರಿ ಗೈಗಡಿಯಾರ ಖರೀದಿಸಿದರೆ, ಅದಕ್ಕೆ ಕೈಗಡಿಯಾರದ ಅಂಗಡಿ ಯಾತ ತೆರಿಗೆ ಪಾವತಿಸ­ ಬೇಕಾಗುತ್ತದೆ.
-suvarna news

loading...

No comments