ಸೀಬೆ ಹಣ್ಣಿನಿಂದ ಆರೋಗ್ಯ ವೃದ್ಧಿ ಹೇಗೆ
ಸೀಬೆಕಾಯಿ ಅಥವಾ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು-ಖಾರ ಹಚ್ಚಿ ತಿನ್ನುವುದೇ ಆನಂದವಲ್ಲವೆ.
ಇದರಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳಿವೆ. ಸೀಬೆಹಣ್ಣು ತಿನ್ನುವುದರಿಂದ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿದೆ.
ಒಂದೇ ಸಮಸ್ಯೆಯೆಂದರೆ, ಇದರಲ್ಲಿನ ಗಟ್ಟಿ ಬೀಜಗಳು, ಈ ಬೀಜಗಳಿರುವುದರಿಂದ ಹಣ್ಣು ತಿನ್ನಲು ಕೆಲವರು ಹಿಂದೇಟು ಹಾಕುತ್ತಾರೆ.
ಸೀಬೆಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿ ಇರುವ ಪೊಟಾಷಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕರಿಸುತ್ತವೆ. ಆ ಮೂಲಕ ಅಧಿಕ ರಕ್ತದ ಒತ್ತಡದ ಸಾಧ್ಯತೆಯನ್ನು ದೂರ ಮಾಡಬಲ್ಲದು.
ಸೀಬೆಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕರಗುವ ನಾರಿನ ಅಂಶಗಳಿಂದಾಗಿ ಇದೊಂದು ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಈ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಕರುಳುಗಳಲ್ಲಿ ಆಹಾರದ ಚಲನೆಯನ್ನು ಚುರುಕುಗೊಳಿಸುತ್ತದೆ.
ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸೀಬೆ ಹಣ್ಣಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಹೇಗೆಂದರೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಸುಸ್ಥಿತಿಯಲ್ಲಿರುವಂತೆ ಮಾಡುತ್ತದೆ.
ಆ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನು ಸೀಬೆಹಣ್ಣು ಮಾಡುತ್ತದೆ.
ಸೀಬೆಹಣ್ಣು ತಿನ್ನುವುದರಿಂದ ದೇಹದಲ್ಲಿ ಪೊಟಾಷಿಯಂ ಮತ್ತು ಸೋಡಿಯಂ ಲವಣಗಳು ಸೂಕ್ತ ರೀತಿಯಲ್ಲಿರುವಂತೆ ಮಾಡುವಲ್ಲಿ ನೆರವಾಗುತ್ತದೆ. ಇದರಿಂದ ಹೃದಯದ ಕಾರ್ಯಕ್ರಮತೆಯನ್ನು ಉತ್ತಮ ರೀತಿಯಲ್ಲಿರುವಂತೆ ಸಹಕರಿಸುತ್ತದೆ.
ಸೀಬೆಹಣ್ಣಿನಲ್ಲಿರುವ ಕ್ಯಾಲ್ಸಿಯಂ, ವಿಟಮಿನ್‌ಗಳು, ವಿವಿಧ ಖನಿಜಗಳು ಸ್ನಾಯುಗಳ ಬೆಳವಣಿಗೆ ಮತ್ತು ದೃಢತೆಗೆ ಸಹಕರಿಸುತ್ತದೆ. ಆ ಮೂಲಕ ದೇಹದ ಆರೋಗ್ಯ ತನ್ನ ಸದೃಢವಾಗಿಡುತ್ತದೆ.
ಮಾತ್ರವಲ್ಲದೆ, ಇದರಲ್ಲಿ ಅಧಿಕವಾಗಿರುವ ವಿಟಮಿನ್ ಸಿ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದಾಗಿ ಜನರನ್ನು ಸಾಮಾನ್ಯವಾಗಿ ಕಾಡುವ ಶೀತ, ಜ್ವರ, ಕೆಮ್ಮು ಮತ್ತಿತರ ಸಣ್ಣಪುಟ್ಟ ಸಮಸ್ಯೆಗಳಿಂದ ದೂರವಿಡಲು ಸಹಕರಿಸುತ್ತದೆ.
ಮೊದಲೇ ಹೇಳಿದಂತೆ ಸೀಬೆಯಲ್ಲಿರುವ ಅತ್ಯಧಿಕ ಪ್ರಮಾಣದಲ್ಲಿರುವ ಕರಗುವ ಮತ್ತು ಕರಗದ ನಾರು ದೇಹದ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಸೀಬೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶಗಳಿದ್ದು, ಮಧುಮೇಹಿಗಳೂ ಇದನ್ನು ತಿನ್ನಬಹುದಾಗಿದೆ. ಇದರಿಂದಾಗಿ ಮಧುಮೇಹಿಗಳು ತಿನ್ನಬಹುದಾದ ಹಣ್ಣುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಈ ಹಣ್ಣನ್ನು ನಿಯಮಿತವಾಗಿ ಸೇವಿಸುವ ಮೂಲಕ, ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವತ್ತ ಗಮನ ಹರಿಸಬಹುದಾಗಿದೆ.

loading...
No comments