Breaking News

ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ


7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಬರೆದಿದ್ದು .ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ .ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಂದೆಯ ಜೊತೆ ಉದ್ಯೋಗಕ್ಕೆ ಯೋಗ್ಯವಾದ ಸ್ಥಳ ಯಾವುದು ಎಂದು ಪ್ರಶ್ನೆ ಕೇಳಿದ್ದಾಳೆ. ಇದಕ್ಕೆ ತಂದೆ ಗೂಗಲ್ ಅತ್ಯುತ್ತಮ ಸ್ಥಳ ಎಂದು ಉತ್ತರಿಸಿದ್ದಾರೆ. ಗೂಗಲ್ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದ ಈಕೆ ಕೊನೆಗೆ ನಾನು ಗೂಗಲ್‍ನಲ್ಲಿ ಉದ್ಯೋಗ ಮಾಡಬೇಕು ಎಂದು ಕೇಳಿದ್ದಾಳೆ.

ಈಕೆಯ ಪ್ರಶ್ನೆಗೆ ತಂದೆ ನನಗೆ ಉದ್ಯೋಗ ಬೇಕೆಂದು ಗೂಗಲ್‍ಗೆ ಒಂದು ಪತ್ರ ಬರೆ ಎಂದು ಸೂಚಿಸಿದ್ದಾರೆ. ಅದರಂತೆ ಆಕೆ ಕಂಪ್ಯೂಟರ್, ರೊಬೊಟ್, ಟ್ಯಾಬ್ಲೆಟ್ ಅಂದರೆ ನನಗೆ ಇಷ್ಟ. ಹೀಗಾಗಿ ನಿಮ್ಮ ಕಂಪೆನಿಯಲ್ಲಿ ಉದ್ಯೋಗ ಬೇಕೆಂದು ಪಿಚೈಗೆ ಪತ್ರ ಬರೆದಿದ್ದಾಳೆ.
ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಚೈ, ಶ್ರಮವಹಿಸಿ ಓದಿ ನಿನ್ನ ಕನಸನ್ನ ನನಸು ಮಾಡು. ಶಾಲಾ ಶಿಕ್ಷಣದ ಬಳಿಕ ಗೂಗಲ್‍ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಎಂದು ಮರು ಪತ್ರ ಬರೆದಿದ್ದಾರೆ.

loading...

No comments