Breaking News

ಚಿನ್ನಮ್ಮ ಜೈಲಿನಲ್ಲಿ ಏನು ಮಾಡುತ್ತಿದ್ದಾರೆ ? ಜೈಲಿನಲ್ಲಿ ಅವರ ದಿನಚರಿ ಹೇಗಿರಲಿದೆ?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ  ದೋಷಿಯಾದ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೊಠಡಿ ಸಂಖ್ಯೆ 48ರಲ್ಲಿ ಶಶಿಕಲಾ ಬಂಧಿಯಾಗಿದ್ದಾರೆ. ಚಿನ್ನಮ್ಮಗೆ ಕೈದಿ ನಂಬರ್ 9234  ಸಂಖ್ಯೆ ನೀಡಲಾಗಿದ್ದು, ಮೂರೂವರೆ ವರ್ಷ ಜೈಲಿನಲ್ಲಿ ಸಾಮಾನ್ಯ ಕೈದಿಯಾಗಿ ಕಾಲ ಕಳೆಯಬೇಕಿದೆ.ಮೊದಲ ದಿನ ರಾತ್ರಿ ಹೊರಗಿನಿಂದಲೇ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತೀವ್ರ ಜರ್ಜರಿತರಾಗಿದ್ದ ಶಶಿಕಲಾ ಸಂಜೆ ಊಟ ಮಾಡಿಲ್ಲ ಎನ್ನಲಾಗಿದೆ.


ಹೇಗಿರುತ್ತೆ ಗೊತ್ತಾ ಶಶಿಕಲಾ ದಿನಚರಿ ?

ಬೆಳಗ್ಗೆ 5.30 ರಿಂದ 7ಗಂಟೆ ನಡುವೆ ಹಾಗೂ ಸಂಜೆ 4.30ರಿಂದ 6.30ರ ನಡುವಿನ ಅವಧಿಯಲ್ಲಿ ವಾಯುವಿಹಾರ ಮಾಡಬಹುದು. ಗ್ರಂಥಾಲಯದಲ್ಲೇ ದಿನಪತ್ರಿಕೆ ಓದಲು ಅವಕಾಶ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ಸೆಲ್‌'ಗೆ ತರಿಸಿಕೊಳ್ಳದೆ, ಗ್ರಂಥಾಲಯಕ್ಕೇ ಹೋಗಿ ಓದುವಂತೆ ಮೂವರಿಗೂ  ಅವಕಾಶ ನೀಡಲಾಗಿದೆ ಎನ್ನಲಾಗ್ತಿದೆ.

ಕೈದಿಗಳಿಗೆ ಏನೇನು ನೀಡಲಾಗಿದೆ ?

ಶಶಿಕಲಾ ಹಾಗೂ ಇಳವರಸಿಗೆ ತಲಾ 4 ಬಿಳಿ ಬಣ್ಣದ ಸೀರೆ, ರವಿಕೆಗಳು

ಸುಧಾಕರನ್‌ಗೆ ತಲಾ ಎರಡು ಬಿಳಿ ಅಂಗಿ, ಚಡ್ಡಿ, ಬಿಳಿ ಟೋಪಿ

ಮೂವರಿಗೂ ತಾಮ್ರದ ತಟ್ಟೆ, ಬಟ್ಟಲು, ಪ್ಲಾಸ್ಟಿಕ್ ತಂಬಿಗೆ

ಮಲಗಲು ಜಮಕಾನ, ಬಿಳಿ ಬಣ್ಣದ ಹೊದಿಕೆ

15 ದಿನಗಳಿಗೊಮ್ಮೆ ಸ್ನಾನದ ಸಾಬೂನು, ಬಟ್ಟೆ ಸಾಬೂನು

ಆಹಾರ ಕ್ರಮ ಹೇಗಿರುತ್ತೆ?

ಬೆಳಗ್ಗೆ 250 ಗ್ರಾಂ  ಆಹಾರ

ಮಧ್ಯಾಹ್ನ, ರಾತ್ರಿ 350 ಗ್ರಾಂ ಊಟ

ಅನ್ನ, ಸಾರಿನ ಜತೆಗೆ ಚಪಾತಿ ಅಥವಾ ಮುದ್ದೆ

ಒಂದು ಹೊತ್ತು 200 ಎಂ.ಎಲ್ ಮಜ್ಜಿಗೆ

ವಾರಕ್ಕೆ ಒಂದು ದಿನ ಮಾಂಸದ ಊಟ

ಇದೇ ಪ್ರಕಾರ ಶಶಿಕಲಾ ಸೇರಿದಂತೆ ಮೂವರು ಕೈದಿಗಳು ನಡೆದುಕೊಳ್ಳಬೇಕಿದೆ. ಮುಖ್ಯವಾಗಿ ಶಶಿಕಲಾಗೆ ಕ್ಯಾಂಡಲ್  ತಯಾರಿಸುವ ಕೆಲಸ ನೀಡಲಾಗಿದ್ದು. ಸಿಎಂ ಗದ್ದುಗೆ ಕನಸು ಕಾಣುತ್ತಿದ್ದ  ಚಿನ್ನಮ್ಮ  ಕ್ಯಾಂಡಲ್ ಕೆಲಸ ಮಾಡುತ್ತಾ ಜೈಲಿನಲ್ಲಿ  ಕಾಲ ಕಳೆಯಬೇಕಾಗಿ ಬಂದಿದ್ದು ದುರಂತ.
loading...

No comments