Breaking News

ಸಿಎಂ ಪಟ್ಟಕ್ಕೆ ಕಂಟಕರಾಗಿರುವ ವಿರುದ್ಧ ಉಗ್ರ ಕ್ರಮಕ್ಕೆ ಚಿನ್ನಮ್ಮ ನಿರ್ಧಾರ..?


ಚೆನ್ನೈ, ಫೆ.8- ಸಿಎಂ ಪಟ್ಟಕ್ಕೆ ಕಂಟಕರಾಗಿರುವ ಓ. ಪನ್ನೀರ್ ಸೆಲ್ವಂ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇಂದು ನಿಯೋಜಿತ ಮುಖ್ಯಮಂತ್ರಿ ವಿ.ಕೆ. ಶಶಿಕಲಾ(Chinamma)  ನಟರಾಜನ್ ನಿರ್ಧರಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.   ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ನಿಧನಾನಂತರ ಅನಿರೀಕ್ಷಿತ ತಿರುವುಗಳ ಬೆಳವಣಿಗೆಗಳ ನಡುವೆಯೇ ಈ ವಿದ್ಯಮಾನ ನಡೆದಿದ್ದು ಜಯಾ ಪರಮಾಪ್ತೆ ಮತ್ತು ನಿಷ್ಠಾವಂತ-ಈ ಎರಡು ಬಣಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ವೇದಿಕೆ ಸಜ್ಜುಗೊಂಡಿದೆ.
www.suddi24x7.in

ಬಂಡಾಯ ಎದ್ದಿರುವ  O ಪನ್ನೀರ್ ವಿರುದ್ಧ ಕ್ರಮ ಕೈಗೊಳ್ಳಲು ಚೆನ್ನೈನಲ್ಲಿ ಇಂದು ಬೆಳಿಗ್ಗೆ ಶಶಿಕಲಾ ನಟರಾಜನ್ ಪಕ್ಷದ ಶಾಸಕರ ಸಭೈ ನಡೆಸಿದರು. ಶಶಿಕಲಾ ಅವರಿಗೆ ನಿಷ್ಠರಾಗಿರುವ ಬಹುತೇಕ ಸಚಿವರು ಮತ್ತು ಶಾಸಕರು ಸಭೈಯಲ್ಲಿ ಹಾಜರಿದ್ದು ತಮ್ಮ ಬೆಂಬಲ ಸೂಚಿಸಿದ್ದಾರೆ.   ಮತ್ತೊಂದು ಬೆಳವಣಿಗೆಯಲ್ಲಿ DMK ಕಾರ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ಇಂದು ನವದೆಹಲಿಗೆ ತೆರಳಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೈೀಟಿ ತಮಿಳುನಾಡು ರಾಜ್ಯದಲ್ಲಿನ ನಡೆಯುತ್ತಿರುವ ಹೈಡ್ರಾಮಾದ ಬಗ್ಗೆ ಮನವಿ ಮಾಡಿ ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದ್ಧಾರೆ.

ಈ ಮಧ್ಯೆ, ಮುಂಬೈನಲ್ಲಿರುವ ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಂದಿನ ಬೆಳವಣಿಗೆಯನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಶಶಿಕಲಾ ಮುಖ್ಯಮಂತ್ರಿಯಾಗಲು ಅರ್ಹರೇ ಅಥವಾ ಇಲ್ಲವೇ ಎಂಬ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದು ಪರಾಮರ್ಶೆ ನಡೆಸುತ್ತಿದ್ದಾರೆ.   ತಮಿಳುನಾಡಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ಚೆನ್ನೈಗೆ ಹಿಂದಿರುಗಲಿದ್ದಾರೆ. ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಸ್ಟಾಲಿನ್ ಪ್ರತ್ಯೇಕವಾಗಿ ವಿದ್ಯಾಸಾಗರ್ ರಾವ್ ಅವರನ್ನು ಭೈೀಟಿ ಮಾಡಿ ತಮ್ಮ ಮನವಿಗಳನ್ನು ಸಲ್ಲಿಸಲಿದ್ದಾರೆ.

ತಮಗೆ 134 ಸಚಿವರು ಸೇರಿದಂತೆ ಬಹುತೇಕ ಎಐಎಡಿಎಂಕೆ ಶಾಸಕರ ಬೆಂಬಲವಿದೆ ಎಂದು ಶಶಿಕಲಾ ಹೇಳಿಕೊಂಡಿದ್ದರೆ, ತಮಿಳುನಾಡಿನ ಜನರು ಮತ್ತು ಜಯಾಲಲಿತಾರ ಬೆಂಬಲಿಗರು ತಮ್ಮ ವರವಾಗಿದ್ದಾರೆ ಎಂದು ಪನ್ನೀರ್ ತಿಳಿಸಿದ್ದಾರೆ.   ಶಶಿಕಲಾ ಮತ್ತು ಪನ್ನೀರ್ ಪರಸ್ಪರ ಕೆಸರೆರೆಚಾಟ ಮುಂದುವರಿದಿದೆ. ಪನ್ನೀರ್ ಬಂಡಾಯದ ಹಿಂದೆ ಡಿಎಂಕೆ ಕೈವಾಡ ಇದೆ ಎಂದು ಶಶಿಕಲಾ ಆರೋಪಿಸಿದ್ದಾರೆ ಆದರೆ ಇದನ್ನು ಪನ್ನೀರ್ ತಳ್ಳಿ ಹಾಕಿದ್ಧಾರೆ.   ತಮ್ಮನ್ನು ಪಕ್ಷದಿಂದ ವಜಾಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ತಮ್ಮ ದಂಗೆ ಹಿಂದೆ ಡಿಎಂಕೆ ಕೈವಾಡವಿದೆ ಎಂಬ ಆರೋಪವನ್ನೂ ತಳ್ಳಿಹಾಕಿದ್ದಾರೆ.



loading...

No comments