Breaking News

ಸೌಜನ್ಯಾ ಅತ್ಯಾಚಾರ ಪ್ರಕರಣ ಮರುತನಿಖೆಗೆ ಸಿಬಿಐ ಕೋರ್ಟ್ ಆದೇಶ


ಬೆಳ್ತಂಗಡಿ : ಕಾಣದ ಪ್ರಭಾವೀ ಕೈಗಳು ಮತ್ತು ಭ್ರಷ್ಟ ಪೊಲೀಸ್ ಅಧಿಕಾರಿಗಳು ನೈಜ ಆರೋಪಿಗಳನ್ನು ರಕ್ಷಿಸಿ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿ ಹಾಕಲಾಯಿತೆಂಬ ಬಲವಾದ ಆರೋಪಗಳಿಗೆ ಕಾರಣವಾಗಿದ್ದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣದ ಸಂಪೂರ್ಣ ಮರುತನಿಖೆ ನಡೆಸುವಂತೆ ಸಿಬಿಐ ಕೋರ್ಟ್ ಆದೇಶ ನೀಡಿದ್ದು, ಇದೀಗ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ಧರ್ಮಸ್ಥಳ ಗ್ರಾಮದ ಪಾಂಗಾಳ ಬಾಬುಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಉಜಿರೆ ಶ್ರೀ ಧ ಮಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸನಿಹದ ಪ್ರಕೃತಿ ಚಿಕಿತ್ಸಾಲಯದ ಪ್ರವೇಶ ದ್ವಾರದ ಪ್ರದೇಶದಲ್ಲಿ ಮುಖ್ಯ ರಸ್ತೆಯ ಬದಿಯಲ್ಲೇ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಪತ್ತೆಯಾಗಿದ್ದಳು. ಪ್ರಕರಣವು ವಿಶ್ವಾಸಾರ್ಹವಾಗಿ ಸಮರ್ಪಕ ತನಿಖೆ ನಡೆದಿಲ್ಲವೆಂಬ ಆರೋಪಗಳು ಇದುವರೆಗೂ ಕೇಳಿ ಬರುತ್ತಲೇ ಇತ್ತು. ಇತ್ತೀಚೆಗಷ್ಟೇ ಮೂರು ಮಂದಿ ಶಂಕಿತ ಆರೋಪಿಗಳಿಗೆ ಸಿಬಿಐ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ಎದುರಿಸಿದ ವ್ಯಕ್ತಿಗಳು ಹೈಕೋರ್ಟಿನಿಂದ ತಡೆಯಾಜ್ಞೆ ತಂದ ಬೆನ್ನಲ್ಲೇ ಇದೀಗ ಸೌಜನ್ಯಾ ಹೆತ್ತವರು ಈ ಹಿಂದಿನ ವಿವಿಧ ತನಿಖೆಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆದಿಲ್ಲವೆಂದು ಸಿಬಿಐ ಕೋರ್ಟಿಗೆ ದೂರು ನೀಡಿದ್ದು, ದೂರಿಗೆ ಸ್ಪಂದಿಸಿದ ಕೋರ್ಟ್ ಮರುತನಿಖೆಗೆ ಆದೇಶಿಸಿದೆ.
source -k ale



loading...

No comments