ಕೊಲೆ ಆರೋಪಿಗೆ ನ್ಯಾಯಾಲಯದ ಹೊರಗೆ ಥಳಿಸಿದ ತೃಪ್ತಿ ದೇಸಾಯಿ
ಪುಣೆ :ಮಹಿಳಾ ಟೆಕ್ಕಿ ಕೊಲೆ ಆರೋಪಿ ಮೇಲೆ ತೃಪ್ತಿ ದೇಸಾಯಿ ಸೇರಿ ನಾಲ್ಕು ಜನ ಹಲ್ಲೆ ನಡೆಸಿದ ಘಟನೆ ವರದಿ ಆಗಿದೆ . ಶಿವಾಜಿನಗರ ಕೋರ್ಟ್ ಆವರಣದಲ್ಲಿ ಕೊಲೆ ಆರೋಪಿ ಸೈಕಿಯಾ (೨೬ ) ಅನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಕರೆ ತಂದ ಸಂದರ್ಭ ಭೂಮಾತಾ ರಣರಾಗಿಣಿ ಕಾರ್ಯಕರ್ತರು ಮುಗಿಬಿದ್ದು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ .ಘಟನೆ ಸಂಬಂಧ ಭೂಮಾತಾ ರಣರಾಗಿಣಿ ಬ್ರಿಗೇಡ್ನ ನಾಲ್ವರು ಕಾರ್ಯಕರ್ತರನ್ನು ಶಿವಾಜಿನಗರ ಪೊಲೀಸರು ಬಂಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ
ಸೈಕಿಯಾ ಇನ್ಫೋಸಿಸ್ ಕಂಪನಿ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತಿದ್ದ ಕಳೆದ ಜನವರಿ ೨೯ ರಂದು ಮಹಿಳಾ ಟೆಕ್ಕಿ ರಸೀಲಾ ನ್ನು ಕೊಲೆ ಮಾಡಿದ್ದ . ರಸೀಲಾ ರನ್ನು ವಿಕ್ರತ ರೀತಿಯಲ್ಲಿ ನೋಡುತಿದ್ದ ಸೈಕಿಯಾ ಗೆ ರಸೀಲಾ ಎಚ್ಚರಿಕೆ ನೀಡಿದ್ದರು.ಈ ಹಿನ್ನಲೆ ಆರೋಪಿ ಸೈಕಿಯಾ ರಸೀಲಾ ಅವರನ್ನು ಹಿಂಜವಾದಿ ೯ ನೇ ಮಹಡಿಯಲ್ಲಿ ಕೊಲೆ ಮಾಡಿದ್ದನು .
loading...
No comments