Breaking News

ಐಎಸ್ ಉಗ್ರರಿಂದ ದ್ರೋಣ್ ಬಳಕೆ

ವಾಷಿಂಗ್‌ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರರು ಬಾಂಬ್ ಅಳವಡಿಸಿದ ಸಣ್ಣ ದ್ರೋಣ್ ತನ್ನ ಹೊಸ ಅಸ್ತ್ರಗಳನ್ನಾಗಿಸಿಕೊಂಡಿರುವ ಭಾರಿ ಆತಂಕಕ್ಕೆ ಕಾರಣವಾಗಿದೆ.
ಅತಿ ಅಪಾಯಕಾರಿ ಬಾಂಬ್‌ಗಳನ್ನು ಸಣ್ಣ ಸಣ್ಣ ಮಾನವರಹಿತ ವಿಮಾನಗಳಾದ ದ್ರೋಣ್‌ಗಳಿಗೆ ಅಳವಡಿಸಿ ಸೇನಾ ಪಡೆಗಳ ನೆಲೆಗಳ ಮೇಲೆ ಹಾರಿ ಬಿಡುವುದನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಕರಗತ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ಇಸ್ಲಾಮಿಕ್ ಸ್ಟೇಟ್ ಉಗ್ರರು ಇರಾಕಿನ ಉತ್ತರ ನದಿ ತೀರದ ಎತ್ತರದ ಭಾಗವನ್ನು ಬಾಂಬ್ ನಿರ್ವಹಿಸಿರುವ ದ್ರೋಣ್‌ಗಳನ್ನು ಹಾರಿ ಬಿಟ್ಟಿದ್ದಾರೆ.
ಸುಮಾರು 6 ಅಡಿಯಷ್ಟು ಚಿಕ್ಕದಾದ ಈ ದ್ರೋಣ್‌ಗಳಿಗೆ ರೆಕ್ಕೆಗಳ ರೀತಿಯ ಭಾಗಗಳು ಇರುತ್ತವೆ. ಅದಕ್ಕೆ ಸಣ್ಣ ಬಾಂಬ್ ಅನ್ನು ಅಳವಡಿಸಲಾಗಿರುತ್ತದೆ.
ಈ ದ್ರೋಣ್‌ಗಳನ್ನು ಹಾರಿಸಿದ ಇಬ್ಬರು ಉಗ್ರರು ಅದರ ಚಲನ ವಲನಗಳನ್ನು ವೀಡಿಯೋ ಚಿತ್ರೀಕರಿಸಿಕೊಂಡು ನೋಡಿದ್ದಾರೆ. ಈ ದ್ರೋಣ್‌ಗಳು ಇರಾಕಿನ ಮೌಸುಲ್ ನಗರದ ಬಳಿಯ ಇರಾಕಿ ಸೇನಾ ಗಡಿ ಠಾಣೆಯ ಬಳಿ ಬಾಂಬ್‌ಅನ್ನು ಬೀಳಿಸಿದೆ.

loading...

No comments