Breaking News

ಕೊಲೆ ಬೆದರಿಕೆ ಸೂಕ್ತ ಕ್ರಮಕ್ಕೆ ಜಗ್ಗೇಶ್ ಒತ್ತಾಯಬೆಂಗಳೂರು:- ಕಳೆದ ಕೆಲವು ದಿನಗಳಿಂದ  ಇಡೀ ರಾಜ್ಯಾದ್ಯಂತ ಶಿವಮೊಗ್ಗದ ಹೆಸರು ಬಾರಿ ಸದ್ದು ಮಾಡುತ್ತಾ ಇದೆ ಕಾರಣ ಸಹ್ಯಾದ್ರಿ ಕಾಲೆಜ್ ನಲ್ಲಿ ವಸ್ರ್ತಸಂಹಿತೆ ಜಾರಿಗೆ ತರಬೇಕು ಮುಸ್ಲಿಂ ಯುವತಿಯರು ಬುರ್ಕಾ ಧರಿಸುವುದನ್ನು (ಕಾಲೆಜ್ ಕ್ಯಾಂಪಸ್ ಒಳಗೆ) ವಿರೋಧಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಾ ಇದ್ದು ಕಾಲೆಜ್ ಆಡಳಿತ ಮಂಡಳಿ ಇದೆಲ್ಲ ಸಾದ್ಯವಿಲ್ಲ ಅಂತ ಉರಿಯುವ ತುಪ್ಪಕ್ಕೆ ಬೆಂಕಿ ಹಾಕಿದೆ.

ಇದರಿಂದ ರೊಚ್ಚಿಗೆದ್ದ ಎಬಿವಿಪಿ ಕಾರ್ಯಕರ್ತರು ಇದೀಗ ಕಾಲೆಜ್ ಗೆ ಕೇಸರಿ ಶಾಲು ದರಿಸಿ ಬರುತ್ತಾ ಇದ್ದು ಪ್ರಕರಣ ಕೊಮು ಬಣ್ಣ ಪಡೆದುಕೊಂಡಿದೆ .

ಇದಕ್ಕೆ ಸಂಭವಿಸಿದಂತೆ ಸೌದಿಯಿಂದ ವಿಡಿಯೋ ಮೂಲಕ ಬಹಿರಂಗ ಕೊಲೆ ಬೆದರಿಕೆಗಳು ಬರುತ್ತಾ ಇದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಕಿಡಿಗೆಡಿಗಳಿಗೆ ಇನ್ನಷ್ಟು ಸಹಕಾರಿಯಾಗಿದೆ .

ಇದೀಗ ಸ್ಥಳಿಯ ಅನ್ಯಕೋಮಿನ ಯುವಕನೊಬ್ಬ ಹಿಂದು ಧರ್ಮದ ಬಗ್ಗೆ ಹಾಗೂ ಪ್ರತಿಭಟನೆ ಮಾಡುತ್ತಿರುವ ತಾಯಂದಿರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ್ದು ಕೈ ಗೆ ಸಿಕ್ಕರೆ ತುಂಡು ತುಂಡಾಗಿ ಕತ್ತರಿಸುವೆ ಅನ್ನುವ ಬೆದರಿಕೆ ಹಾಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಯಾಗತ್ತಾ ಇದೆ.

ಈ ಎಲ್ಲಾ ಘಟನೆ ಬಗ್ಗೆ ಮೊದಲ ಬಾರಿಗೆ ಕನ್ನಡ ಚಿತ್ರರಂಗದಿಂದ ಹಾಸ್ಯ ನಟ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದು ಇಂತಹ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಾಂತಿ ಕಾಪಾಡುವಂತೆ ಪೋಲಿಸರಿಗೆ ಮನವಿ ಮಾಡಿದ್ದಾರೆ .

ದಿನದಿಂದ ದಿನಕ್ಕೆ ಪ್ರಕರಣ ಬಹಳ ತೀವ್ರತೆ ಪಡೆಯುತ್ತಾ ಇದ್ದು ಪೋಲಿಸರು ಕೂಡಲೆ ಇಂತಹ ಸಮಾಜಘಾತುಕರ ಹೆಡೆಮುರಿ ಕಟ್ಟದೆ ಇದ್ದಲ್ಲಿ ಮುಂದೆ ಬಹುದೊಡ್ಡ. ಅನಾಹುತ ನಡೆದರೂ ಅಚ್ಚರಿ ಇಲ್ಲ

loading...

No comments