ಹಾವಿನ ಜೊತೆ ಸೆಲ್ಫಿ ತೆಗೆದು ಜೈಲುಪಾಲಾದ ನಟಿ.
ಥಾಣೆ : 'ನಾಗಾರ್ಜುನ' ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಹೆಸರಾಂತ ನಟಿ ಶ್ರುತಿ ಉಲ್ಫತ್ ಹಾವಿನ ಜೊತೆ ಸೆಲ್ಫಿ ತೆಗೆಯಲು ಹೋಗಿ ಜೈಲು ಕಂಬಿ ಎಣಿಸುವಂತಾಗಿದೆ. 'ನಾಗಾರ್ಜುನ' ಧಾರವಾಹಿಯ ಚಿತ್ರೀಕರಣಕ್ಕಾಗಿ ಜೀವಂತ ಹಾವನ್ನು ತರಲಾಗಿತ್ತು, ಇದೇ ಹಾವಿನ ಜೊತೆ ನಟಿ ಶ್ರುತಿ ಉಲ್ಫತ್ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ.
ನಟಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಫೋಟೋಗಳು ವೈರಲ್ ಆಗಿದ್ದು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಗೆ ಈ ಸಂಬಂಧ ದೂರು ಹೋಗಿದೆ. ಜೀವಂತ ಹಾವುಗಳನ್ನು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ಕಾರಣಕ್ಕೂ ಚಿತ್ರೀಕರಣಕ್ಕೆ ಬಳಸುವಂತಿಲ್ಲ.
ಈ ಹಿನ್ನೆಲೆಯಲ್ಲಿ ನಟಿ ಶ್ರುತಿ ಉಲ್ಫತ್ ಸಹಿತ ಇತರ ಮೂವರ ಮೇಲೆ ಕೇಸು ದಾಖಲಿಸಿದ ಅರಣ್ಯಾಧಿಕಾರಿಗಳು ಬಂಧಿಸಿ ಬೋಲಿವಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಫೆಬ್ರವರಿ 16ರ ವರೆಗೆ ಜೈಲು ಶಿಕ್ಷೆ ವಿಧಿಸಿದೆ.
loading...
No comments