ಹುತಾತ್ಮ ವೀರಯೋಧ ಸಂದೀಪ್ ಪಾರ್ಥಿವ್ ಕುಟುಂಬಕ್ಕೆ 50ಸಾವಿರ ರೂಪಾಯಿ ನೀಡಿದ ಬಿಗ್ ಬಾಸ್ ವಿಜೇತ ಪ್ರಥಮ್
ಹಾಸನ : ಖಾಸಗಿ ಚಾನಲ್ ನಲ್ಲಿ ಪ್ರಸಾರವಾದ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಿಜೇತ ಪ್ರಥಮ್ ಹುತಾತ್ಮ ವೀರಯೋಧ ಸಂದೀಪ್ ಹುಟ್ಟೂರು ಹಾಸನದ ದೇವಿಹಳ್ಳಿಗೆ ಆಗಮಿಸಿ ಸಂದೀಪ್ ತಂದೆ ಪುಟ್ಟರಾಜು ಹಾಗೂ ತಾಯಿ ಗಂಗಮ್ಮನವರಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ 50ಸಾವಿರ ರೂಪಾಯಿ ಹಣವನ್ನು ಸಂದೀಪ್ ಕುಟುಂಬಕ್ಕೆ ಹಸ್ತಾಂತರಿಸಿದರು . ಬಿಗ್ ಬಾಸ್ ನಲ್ಲಿ ಗೆದ್ದ ಹಣ ಇನ್ನೂ ಕೈ ಸೇರಿಲ್ಲವಾದರೂ ತಮ್ಮ ಕೈಯಲ್ಲಿದ್ದ ಹಣವನ್ನು ಪ್ರಥಮ್ ನೀಡಿದ್ದಾರೆ. ಈ ಮೂಲಕ ಬಿಗ್ ಬಾಸ್ ವೇದಿಕೆಯಲ್ಲಿ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ಇನ್ನು ಮುಂದೆ ಕೂಡ ತನ್ನ ಕೈಲಾದ ಮಟ್ಟಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ .
loading...
No comments