Breaking News

ರೈಲು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ


ಕುಣಿಗಲ್ :  ನೂರಕ್ಕೂ ಅಧಿಕ ಸಿಬ್ಬಂದಿ ಹೊತ್ತ ಪರೀಕ್ಷಾರ್ಥ ರೈಲಿಗೆ ಸಂಭವಿಸಬಹುದಾಗಿದ್ದ ಭಾರಿ ಅವಘಡ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿರುವ ಘಟನೆ ನಡೆದಿದೆ. 
ರೈಲ್ವೆ ಕಾಮಗಾರಿಯಿಂದ ಮಲ್ಲಾಘಟ್ಟ ವಾರ್ಡ್ ಇಬ್ಭಾಗವಾಗಿದ್ದು ಜನರಿಗೆ ತೊಂದರೆ ಆಗುತ್ತಿದೆ. ಅದನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡದ ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗುರುವಾರ ರೈಲು ಹಳಿಗೆ ಬಂಡೆಗಳನ್ನಿಟ್ಟು ಗುರುವಾರ ನಾಗರಿಕರು ಪ್ರತಿಭಟನೆ ನಡೆಸಿದರು. 
ಇದೇ ಸಂದರ್ಭದಲ್ಲಿ ತಾಲೂಕಿನ ಎಡೆಯೂರಿನಿಂದ ನಾಗಮಂಗಲ ತಾಲೂಕಿನ ಬಾಲಗಂಗಾಧರ ನಗರದವರೆಗಿನ ನೆಲಮಂಗಲ-ಶ್ರವಣಬೆಳಗೊಳ ನೂತನ ರೈಲ್ವೆ ಹಳಿ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ರೈಲಿನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ಎರಡನೆ ವಾರ್ಡ್‌ನ ಮಲ್ಲಾಘಟ್ಟ ಬಳಿ ರೈಲ್ವೆ ಹಳಿಗೆ ಬಂಡೆಹಾಕಿದ್ದನ್ನು ಗಮನಿಸಿದ ರೈಲು ಚಾಲಕ ದಿಢೀರ್ ರೈಲು ನಿಲ್ಲಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅವಘಡ ತಪ್ಪಿಹೋಗಿದೆ. 

loading...

No comments